ಮೈಸೂರು:ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ)ವನ್ನು ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದು ಪ್ರಗತಿಪರ ಚಿಂತಕ ಪ್ರೊ ಕೆ ಎಸ್ ಭಗವಾನ್ ಹರಿಹಾಯ್ದಿದ್ದಾರೆ. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಬಗ್ಗೆ ಆರ್ಎಸ್ಎಸ್ನವರು ಮಾತನಾಡುತ್ತಾರೆ. ಆದರೆ, ದೇಶದ ಧರ್ಮ ಹಿಂದೂ ಧರ್ಮವಲ್ಲ. ಬೌದ್ಧ ಧರ್ಮ ದೇಶದ ಮಣ್ಣಿನ ಧರ್ಮ ಎಂದಿದ್ದಾರೆ.
ವರ್ಣ ವ್ಯವಸ್ಥೆ ಸಮಾಜದಿಂದ ಬಿಡುಗಡೆಯಾಗಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದಂತೆ ನಿಮ್ಮದೇ ಕೇಂದ್ರ ಸರ್ಕಾರದ ಮೇಲೂ ಒತ್ತಾಯ ಮಾಡಿ ಎಂದು ಹೇಳಿದರು.