ಮೈಸೂರು:ಮುಂದಿನ ವರ್ಷದಿಂದ ಜಂಬೂಸವಾರಿ ಮೆರವಣಿಗೆ ವೇಳೆ ಚಿನ್ನದ ಅಂಬಾರಿಯಲ್ಲಿ ಮಹಿಷನ ಫೋಟೋ ಇಡಬೇಕು. ಚಾಮುಂಡಿ ಭಾವಚಿತ್ರವನ್ನ ಇಡುವುದನ್ನು ಪ್ರಶ್ನಿಸಿ ಸರ್ಕಾರದ ವಿರುದ್ಧ ನಾವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುತ್ತೇವೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಹೇಳಿದ್ದಾರೆ.
ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಅಶೋಕಪುರಂನ ಉದ್ಯಾನವನದಲ್ಲಿ ಏರ್ಪಡಿಸಿದ್ದ ಮಹಿಷ ದಸರಾ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಚಿನ್ನದ ಅಂಬಾರಿ ಮೇಲೆ ಚಾಮುಂಡೇಶ್ವರಿ ವಿಗ್ರಹ ಕೂರಿಸುವುದು ಸಂವಿಧಾನಕ್ಕೆ ಮಾಡಿದ ದೊಡ್ಡ ಅಪಚಾರ. ಚಾಮುಂಡಿ ಸಮಸ್ತ ಭಾರತದ ಪ್ರತಿನಿಧಿಯಲ್ಲ. ಭಾರತದ ಸಂವಿಧಾನದ ಪ್ರತಿನಿಧಿಯಲ್ಲ. ಏಕಸಂಸ್ಕೃತಿ ಪ್ರತಿನಿಧಿ ಎಂದು ತಿಳಿಸಿದ್ದಾರೆ.
ಇವತ್ತು ಏಕತ್ವ ಹಾಗೂ ಬಹುತ್ವ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಅಂಬಾರಿಯಲ್ಲಿ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾತ್ಮಾ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್, ಮಹಿಷ, ನಾಲ್ವಡಿ ಕೃಷ್ಣರಾಜ ಒಡೆಯರ್ ಇವರ ಫೋಟೋಗಳನ್ನು ಇಡಬೇಕು. ಅಂಬಾರಿಯಲ್ಲಿ ಮುಂದಿನ ವರ್ಷದಿಂದ ಚಾಮುಂಡಿ ವಿಗ್ರಹವನ್ನು ಇಡಬಾರದು ಎಂದು ರಾಜ್ಯ ಸರ್ಕಾರದ ವಿರುದ್ಧ ಪಿಐಎಲ್ ಸಲ್ಲಿಸುತ್ತೇವೆ ಎಂದಿದ್ದಾರೆ.