ಕರ್ನಾಟಕ

karnataka

ETV Bharat / state

ವಿಶ್ವದ ಟಾಪ್ ಮೋಸ್ಟ್ ವಿಜ್ಞಾನಿಗಳ ಪಟ್ಟಿಯಲ್ಲಿ ಕನ್ನಡಿಗನಿಗೆ ಸ್ಥಾನ: ಇವರು ಮೈಸೂರಿನ ಹೆಮ್ಮೆ - ಸ್ಟ್ಯಾನ್ ಫೋರ್ಡ್ ವಿವಿ ಟಾಪ್ ಮೋಸ್ಟ್ ವಿಜ್ಞಾನಿಗಳ ಪಟ್ಟಿ

ಅಮೆರಿಕದ ಸ್ಟ್ಯಾನ್ ಫೋರ್ಡ್ ವಿವಿ ಬಿಡುಗಡೆ ಮಾಡಿರುವ ವಿಶ್ವದ ಟಾಪ್ ಮೋಸ್ಟ್ ವಿಜ್ಞಾನಿಗಳ ಪಟ್ಟಿಯಲ್ಲಿ ಮೈಸೂರಿನ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಸ್ಥಾನ ನೀಡಲಾಗಿದೆ.

Prof. KS Rangappa named world's top most scientists
ವಿಶ್ವದ ಟಾಪ್ ಮೋಸ್ಟ್ ಪಟ್ಟಿಯಲ್ಲಿ ಮೈಸೂರು ವಿಜ್ಞಾನಿಗೆ ಸ್ಥಾನ

By

Published : Nov 2, 2020, 2:27 PM IST

ಮೈಸೂರು:ಅಮೆರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿರುವ ವಿಶ್ವದ ಟಾಪ್ ಮೋಸ್ಟ್ ವಿಜ್ಞಾನಿಗಳ ಪೈಕಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಸ್ಥಾನ ಒಲಿದಿದೆ.

25 ಪುಟಗಳ ಪಟ್ಟಿಯನ್ನು ಸ್ಟ್ಯಾನ್ ಫೋರ್ಡ್ ವಿವಿ ಬಿಡುಗಡೆ ಮಾಡಿದೆ. ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪೈಕಿ ಭಾರತದ ಶೇ. 2 ರಷ್ಟು ವಿಜ್ಞಾನಿಗಳನ್ನ ಸ್ಟ್ಯಾನ್ ಫೋರ್ಡ್ ವಿವಿ ಪಟ್ಟಿ ಮಾಡಿತ್ತು. ಈ ಪೈಕಿ ಸಾವಯವ ರಸಾಯನಶಾಸ್ತ್ರ (ORGANIC CHEMISTRY ) ವಿಭಾಗದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಮಾಡಿರುವ ಸಾಧನೆ‌ ಪರಿಗಣಿಸಿ ಸ್ಥಾನ ನೀಡಲಾಗಿದೆ.

ಜಾಗತಿಕ ರ‍್ಯಾಂಕಿಂಗ್ ಪಟ್ಟಿಯಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ 2,181 ನೇ ಸ್ಥಾನ ಲಭಿಸಿದೆ. ಇವರ 438 ಸಂಶೋಧನಾ ಪ್ರಬಂಧಗಳನ್ನು ರ‍್ಯಾಂಕಿಂಗ್ ಆಯ್ಕೆ ವೇಳೆ ಪರಿಗಣನೆ ಮಾಡಲಾಗಿದೆ. ದೇಶದಲ್ಲಿ ಅಂದಾಜು 750 ವಿಶ್ವವಿದ್ಯಾನಿಲಯಗಳ (ಸರಕಾರಿ ಸ್ವಾಮ್ಯದ ) ಪೈಕಿ, ಮೈಸೂರು ವಿವಿಯ ಪ್ರೊ.ಕೆ.ಎಸ್.ರಂಗಪ್ಪ ಅವರೊಬ್ಬರೇ ಸ್ಥಾನ ಪಡೆದಿರುವುದು ವಿಶೇಷವಾಗಿದೆ.

ವಿಶ್ವದ ಟಾಪ್​ಮೋಸ್ಟ್​ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರೊ.ಕೆ.ಎಸ್.ರಂಗಪ್ಪ

ಪ್ರೊ.ಕೆ.ಎಸ್.ರಂಗಪ್ಪ ಅವರು ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. 500 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ ಮತ್ತು 11 ವಿವಿಧ ಸಂಶೋಧನಾ ಪೇಟೆಂಟ್ಸ್​ ಗಳಿಸಿದ್ದಾರೆ. ಮಾಲಿಕ್ಯೂಲರ್ ಕೆಮಿಸ್ಟ್ರಿಯಲ್ಲಿ ಇವರು ಮಾಡಿರುವ ಹಲವಾರು ಸಂಶೋಧನೆಗಳು, ಈಗ ಚೀನಾ, ಸಿಂಗಾಪುರದಲ್ಲಿ ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ. ವಿವಿಧ ದೇಶಗಳ 350 ರಿಂದ 400 ಮಂದಿ ಸಂಶೋಧಕರು ಪ್ರೊ.ರಂಗಪ್ಪ ಅವರ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.

For All Latest Updates

TAGGED:

ABOUT THE AUTHOR

...view details