ಮೈಸೂರು :ದೀಪ ಹಚ್ಚಿ, ಜಾಗಟೆ ಬಾರಿಸಿರುವುದರಿಂದ ಕೊರೊನಾ ಹೋಗಲಿಲ್ಲ. ಇದಕ್ಕೆ ನಮ್ಮ ಪರಂಪರೆ, ಆಹಾರ ಪದ್ಧತಿ ಕಾರಣ ಎಂದು ಪ್ರಗತಿಪರ ಚಿಂತಕ ಪ್ರೊ. ಅರವಿಂದ ಮಾಲಗತ್ತಿ ವ್ಯಾಖ್ಯಾನಿಸಿದರು.
ಪ್ರಗತಿಪರ ಚಿಂತಕ ಪ್ರೊ. ಅರವಿಂದ ಮಾಲಗತ್ತಿ.. ಓದಿ: ನಿಶ್ಚಯಿಸಿದ್ದ ಮದುವೆ ರದ್ದು.. ವಿವಾಹವಾಗ್ಬೇಕಿದ್ದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..
ದೇವರಾಜ ಮಾರುಕಟ್ಟೆಯ ಮುಂಭಾಗವಿರುವ ಚಿಕ್ಕ ಗಡಿಯಾರದ ಮುಂದೆ ಬೀದಿ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಕೊರೊನಾ ಕಂಟ್ರೋಲ್‌ನಲ್ಲಿದೆ ಅಂದರೆ ಅದಕ್ಕೆ ತಟ್ಟೆ ಬಾರಿಸಿದ್ದು, ದೀಪ ಹಚ್ಚಿದ್ದು ಕಾರಣ ಅಲ್ಲ.
ಕೊರೊನಾ ಹೋಗಿಸಲು ಔಷಧಿ ಮುಖ್ಯ, ಅದಕ್ಕೆ ಅದರದೇ ಆದ ಕರ್ತವ್ಯಗಳಿವೆ. ಅದನ್ನ ಮಾಡಿದಾಗ ಮಾತ್ರ ಕೊರೊನಾ ತಡೆಯಲು ಸಾಧ್ಯ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಕೊರೊನಾ ಆರ್ಭಟದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳು ಹೃದಯ ಪೂರ್ವಕವಾಗಿ ಕೆಲಸ ಮಾಡಿವೆ. ಆದರೆ, ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಇದನ್ನೇ ಬಂಡವಾಳ ಮಾಡಿಕೊಂಡರು ಎಂದು ಹರಿಹಾಯ್ದರು.
ರೈತರ ಹೋರಾಟದಲ್ಲಿ ಪಾವಿತ್ರ್ಯತೆ ಹಾಳು :ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಘಟನೆಗೆ ರೈತರು ಕಾರಣರಲ್ಲ. ಆದರೆ, ರೈತರೊಟ್ಟಿಗೆ ಒಳನುಗ್ಗಿದ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ. ದುಷ್ಟ ಶಕ್ತಿಗಳು ಒಳ ಸೇರಿ ನೆಲದ ಪಾವಿತ್ರ್ಯತೆ ಹಾಳು ಮಾಡಿದವು. ಈಗ ಆ ದುಷ್ಟ ಶಕ್ತಿಗಳನ್ನ ಹುಡುಕುವ ಆಗತ್ಯವಿದೆ. ದುಷ್ಟ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.