ಕರ್ನಾಟಕ

karnataka

ETV Bharat / state

ಕೋವಿಡ್ ರೋಗಿಗಳನ್ನು ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳು : ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಆರೋಪ - ಮೈಸೂರು ಜಿಲ್ಲಾ ಸುದ್ದಿ

ಪ್ರತಿದಿನ ರೋಗಿಗಳಿಗೆ ಬೆಡ್, ಐಸೋಲೇಷನ್, ವೆಂಟಿಲೇಟರ್ ಜೊತೆಗೆ ಯಾವುದೇ ರೀತಿಯ ಚಿಕಿತ್ಸೆ ನೀಡಲು ಪ್ರತಿದಿನ ₹15 ರಿಂದ-50 ಸಾವಿರದವರೆಗೂ ಚಾರ್ಜ್ ಮಾಡುತ್ತಿವೆ. ಸೋಂಕಿತರಿಂದ ಸುಲಿಗೆ ಮಾಡುತ್ತಿದ್ದಾರೆ..

private-hospitals-that-are-extorting
ಕೋವಿಡ್​ ತಪಾಸಣೆ

By

Published : Sep 1, 2020, 7:57 PM IST

ಮೈಸೂರು :ಸಾಂಸ್ಕೃತಿಕ ನಗರಿಯಲ್ಲಿ ಕೊರೊನಾ ಸೋಂಕಿತ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ಲಾಭ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಚಿಕಿತ್ಸಾ ರೂಪದಲ್ಲಿ ಸುಲಿಗೆ ಮಾಡುತ್ತಿರುವ ಕುರಿತು ನಿತ್ಯ ವರದಿಯಾಗುತ್ತಿವೆ.

ಜಿಲ್ಲೆಯಲ್ಲಿ ಸೋಂಕಿತರಲ್ಲದೆ, ಕೋವಿಡೇತರ ರೋಗಿಗಳು ಜೊತೆಗೆ ಹಣ ಇರುವವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ತಮ್ಮ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳದೆ ನಗರದ ಹೊರ ವಲಯದ ಆಸ್ಪತ್ರೆ, ಅಪಾರ್ಟ್‌ಮೆಂಟ್‌ಗಳು​​, ಲಾಡ್ಜ್​​ ಹಾಗೂ ಹೋಟೆಲ್​ಗಳನ್ನು ಬಾಡಿಗೆ ಪಡೆದು ಅವುಗಳಲ್ಲಿ ಚಿಕಿತ್ಸೆ ನೀಡುತ್ತಿವೆ.

ಕೊರೊನಾ ವೇಳೆ ಖಾಸಗಿ ಆಸ್ಪತ್ರೆಗಳ ಸುಲಿಗೆಕೋರತನದ ಆರೋಪ

ಪ್ರತಿದಿನ ರೋಗಿಗಳಿಗೆ ಬೆಡ್, ಐಸೋಲೇಷನ್, ವೆಂಟಿಲೇಟರ್ ಜೊತೆಗೆ ಯಾವುದೇ ರೀತಿಯ ಚಿಕಿತ್ಸೆ ನೀಡಲು ಪ್ರತಿದಿನ ₹15 ರಿಂದ-50 ಸಾವಿರದವರೆಗೂ ಚಾರ್ಜ್ ಮಾಡುತ್ತಿವೆ. ಸೋಂಕಿತರಿಂದ ಸುಲಿಗೆ ಮಾಡುತ್ತಿದ್ದಾರೆ. ಜೊತೆಗೆ ಆಯುಷ್ಮಾನ್ ಭಾರತ್ ಸೇರಿ ಇತರ ವಿಮಾ ಕಂಪನಿಗಳ ಹಣವನ್ನು ಕ್ಲೈಮ್ ಮಾಡಿ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತ ಏನನ್ನೂ ಕೇಳುತ್ತಿಲ್ಲ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸುಲಿಗೆ ಹೆಚ್ಚಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ABOUT THE AUTHOR

...view details