ಕರ್ನಾಟಕ

karnataka

ETV Bharat / state

ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ... ರಾಷ್ಟ್ರಪತಿ ಆಹ್ವಾನಿಸಿದ ರಾಜಮಾತೆ - ಜಯಚಾಮರಾಜ ಒಡೆಯರ್

ಜುಲೈ 18 ರಂದು ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ನಡೆಯಲಿದೆ. ಜಗನ್ಮೋಹನ ಅರಮನೆಯಲ್ಲಿರುವ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯನ್ನು ರಿಪೇರಿ ಮಾಡಿಸಲಾಗಿದ್ದು, ಅವರ ಶತಮಾನೋತ್ಸವ ದಿನದಂದು ಉದ್ಘಾಟನೆಯಾಗಲಿದೆ.

ರಾಷ್ಟ್ರಪತಿ ಆಹ್ವಾನಿಸಿದ ರಾಜಮಾತೆ

By

Published : Jun 20, 2019, 1:41 AM IST

ಮೈಸೂರು:ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಪೂರ್ವ ತಯಾರಿ ನಡೆಸುತ್ತಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಜುಲೈ 18 ರಂದು ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಬೇಕೆಂದುಕೊಂಡಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಕಳೆದ ಒಂದು ವರ್ಷದಿಂದ ಶ್ರಮ ಹಾಕುತ್ತಿದ್ದಾರೆ. ಜಗನ್ಮೋಹನ ಅರಮನೆಯಲ್ಲಿರುವ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯನ್ನು ರಿಪೇರಿ ಮಾಡಿಸಲಾಗಿದ್ದು, ಅವರ ಶತಮಾನೋತ್ಸವ ದಿನದಂದು ಉದ್ಘಾಟನೆಯಾಗಲಿದೆ.

ಈ ಕಾರ್ಯಕ್ರಮಕ್ಕೆ ರಾಜವಂಶಸ್ಥರು, ಅರಮನೆ ಕುಟುಂಬದ ಆಪ್ತರು, ರಾಜಕೀಯ ಗಣ್ಯರು ಹಾಗೂ ಇತರೆ ಹಲವಾರು ಗಣ್ಯರಿಗೆ ರಾಜಮಾತೆ ಪ್ರಮೋದಾದೇವಿ ಆಹ್ವಾನ ನೀಡುತ್ತಿದ್ದಾರೆ.

ABOUT THE AUTHOR

...view details