ಮೈಸೂರು: ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪೂರ್ವ ಸಿದ್ಧತೆ ನಿಮಿತ್ತ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಅಮರ್ ಖುಷ್ವ (ದೂರವಾಣಿ ಸಂಖ್ಯೆ: 7259813556) ಹಾಗೂ ವೆಚ್ಚ ವೀಕ್ಷಕರಾಗಿ ಉಪಿಂದರ್ ಬಿರ್ ಸಿಂಗ್ (ದೂರವಾಣಿ ಸಂಖ್ಯೆ: 7899831135) ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
ಹುಣಸೂರು ಉಪಚುನಾವಣೆಯಲ್ಲಿ ಒಟ್ಟು 21 ಅಭ್ಯರ್ಥಿಗಳಿಂದ 31 ನಾಮಪತ್ರ ಸ್ವೀಕೃತವಾಗಿದ್ದವು. 11 ಅಭ್ಯರ್ಥಿಗಳು ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದು, ಅಂತಿಮವಾಗಿ 10 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ನೀಡಿದರು.
ಚುನಾವಣಾಧಿಕಾರಿಯಾಗಿ ಹುಣಸೂರು ಉಪವಿಭಾಗದ ಉಪವಿಭಾಗಾಧಿಕಾರಿಗಳಾದ ಎಸ್.ಪೂವಿತ ಅವರು (ದೂ.ಸಂಖ್ಯೆ: 9606137722) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹುಣಸೂರು ತಾಲೂಕಿನ ತಹಶೀಲ್ದಾರ್ ಬಸವರಾಜ್ ಐ.ಇ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಣಸೂರು ವಿಧಾನಸಭಾ ಕ್ಷೇತ್ರದದಲ್ಲಿ ಒಟ್ಟು 274 ಮತಗಟ್ಟೆಗಳಿದ್ದು, ಒಟ್ಟು 2,27,974 ಮತದಾರರಿದ್ದಾರೆ. 1,14,146 ಪುರಷ ಮತದಾರರು, 1,12,770 ಮಹಿಳಾ ಮತದಾರರು, 4 ಇತರ ಮತದಾರರು ಇದ್ದು, ಹೆಚ್ಚುವರಿಯಾಗಿ 434 ಪುರುಷ ಮತದಾರರು ಹಾಗೂ 618 ಮಹಿಳಾ ಮತದಾರರು, ಹಾಗೂ 6 ಇತರ ಮತದಾರರು ಸೇರ್ಪಡೆಯಾಗಿದ್ದು, ವಿಶೇಷ ಚೇತನ ಮತದಾರರು ಒಟ್ಟು 2,235 ಇದ್ದು ಹೊಸದಾಗಿ ಯಾರು ಸೇರ್ಪಡೆಯಾಗಿಲ್ಲ ಎಂದು ಹೇಳಿದರು.
ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ಅಗತ್ಯವಾದ ಕನಿಷ್ಠ ಸೌಲಭ್ಯಗಳಾದ ಕುಡಿವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ರ್ಯಾಂಪ್ ವ್ಯವಸ್ಥೆಯನ್ನು ಮಾಡಲಾಗಿದೆ. ಬ್ಯಾಲೆಟ್ ಯುನಿಟ್ 329, ಕಂಟ್ರೋಲ್ ಯುನಿಟ್ 329 ಹಾಗೂ ವಿವಿಪ್ಯಾಟ್ 357 ಮತಯಂತ್ರಗಳನ್ನು ಹುಣಸೂರು ತಾಲೂಕಿನ ನಗರಸಭೆ ಕಾರ್ಯಾಲಯ ಕಟ್ಟಡ ಭದ್ರತಾ ಕೊಠಡಿಯಲ್ಲಿ ಪೊಲೀಸ್ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ಸುರಕ್ಷಿತವಾಗಿ ಇಡಲಾಗಿದೆ ಎಂದರು.