ಕರ್ನಾಟಕ

karnataka

ETV Bharat / state

ಎಸ್.ಎ.ರಾಮದಾಸ್​​ಗೆ ಸಚಿವ ಸ್ಥಾನ ನೀಡುವಂತೆ ಪ್ರೇಮಕುಮಾರಿ ಒತ್ತಾಯ - SA Ramadas

ಎಸ್.ಎ.ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಪ್ರೇಮಕುಮಾರಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸಿಎಂಗೆ ಒತ್ತಾಯಿಸಿದ್ದಾರೆ.

SA Ramadas a ministerial position
ರಾಮದಾಸ್​​ಗೆ ಸಚಿವ ಸ್ಥಾನ ನೀಡುವಂತೆ ಬ್ಯಾಟಿಂಗ್ ಮಾಡಿದ ಪ್ರೇಮಕುಮಾರಿ

By

Published : Feb 9, 2020, 6:46 PM IST

ಮೈಸೂರು: ಮೂಲ ಬಿಜೆಪಿಯ ಅನೇಕ ನಾಯಕರು ಸಚಿವ ಸ್ಥಾನ‌ ಸಿಗದಿರುವ ಹಿನ್ನೆಲೆಯಲ್ಲಿ ಮುನಿಸಿಕೊಂಡರೆ, ಇತ್ತ ಎಸ್.ಎ. ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಪ್ರೇಮಕುಮಾರಿ ವಿಡಿಯೋ ಬಿಡುಗಡೆ ಮಾಡಿ ಒತ್ತಾಯಿಸಿದ್ದಾರೆ.

ರಾಮದಾಸ್​​ಗೆ ಸಚಿವ ಸ್ಥಾನ ನೀಡುವಂತೆ ಬ್ಯಾಟಿಂಗ್ ಮಾಡಿದ ಪ್ರೇಮಕುಮಾರಿ

ಮುಖ್ಯಮಂತ್ರಿ ಬಿ.ಎಸ್‌‌.ಯಡಿಯೂರಪ್ಪ ವಿರುದ್ಧ ಪ್ರೇಮ ಕುಮಾರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನನ್ನ ಕಾರಣ ಮುಂದಿಟ್ಟುಕೊಂಡು ಯಡಿಯೂರಪ್ಪ ಅವರು ಎಸ್‌.ಎ. ರಾಮ್​​​ದಾಸ್ ಅವರಿಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ. ಈ ಮೂಲಕ ನಮ್ಮ ಕುಟುಂಬ ಹಾಗೂ ರಾಮ್​ದಾಸ್ ಅವರನ್ನು ತುಳಿಯುತ್ತಿದ್ದಾರೆ. ವೀರಶೈವ ಲಿಂಗಾಯತ ವ್ಯಕ್ತಿಯಾಗಿ ವೀರಶೈವ ಲಿಂಗಾಯತ ಕುಟುಂಬದ ಹೆಣ್ಣುಮಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಆರೊಪಿಸಿದ್ದಾರೆ.

ಯಡಿಯೂರಪ್ಪ ನಾಲಾಯಕ್ ಮುಖ್ಯಮಂತ್ರಿ, ನಮ್ಮದು ವೈಯಕ್ತಿಕ ವಿಚಾರ. ಆದರೆ ಇದನ್ನೇ ಮುಂದಿಟ್ಟುಕೊಂಡು ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ. ಯಡಿಯೂರಪ್ಪ ನಮ್ಮ ವೈಯಕ್ತಿಕ ವಿಷಯದ ಮೂಲಕ ರಾಮ್​​​ದಾಸ್ ಹಾಗೂ ನನ್ನನ್ನು ದೂರ ಮಾಡಿದ್ದಾರೆ. ನಾನು ಎಲ್ಲಾ ದಾಖಲೆ ಇಟ್ಟುಕೊಂಡಿದ್ದೇನೆ. ಕೋರ್ಟ್​ನಲ್ಲಿ ನನಗೆ ನ್ಯಾಯ ಸಿಗುತ್ತೆ ಎಂದು ಕಿಡಿಕಾರಿದ್ದಾರೆ. 9 ನಿಮಿಷ ವಿಡಿಯೋದಲ್ಲಿ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.

ABOUT THE AUTHOR

...view details