ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಹೆಚ್1 ಎನ್1ಗೆ ತುಂಬು ಗರ್ಭಿಣಿ ಬಲಿ - pregnant died due to H1N1 in mysore

ಹಂದಿಜ್ವರಕ್ಕೆ ತುಂಬಿ ಗರ್ಭಿಣಿಯೋರ್ವರು ಮೃತಪಟ್ಟಿರುವ ಘಟನೆ ಮೈಸೂರಿನ ಕೋಣನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

pregnant-died-due-to-h1n1-in-mysore
ಮೈಸೂರಿನಲ್ಲಿ ಹೆಚ್1 ಎನ್1ಗೆ ತುಂಬು ಗರ್ಭಿಣಿ ಬಲಿ

By

Published : Sep 1, 2022, 5:21 PM IST

ಮೈಸೂರು : ಹೆಚ್1 ಎನ್1 ಸಾಂಕ್ರಾಮಿಕ ರೋಗಕ್ಕೆ ತುಂಬು ಗರ್ಭಿಣಿಯೊಬ್ಬರು ಬಲಿಯಾಗಿರುವ ಘಟನೆ ಹುಣಸೂರು ತಾಲೂಕಿನ ಕೋಣನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. 28 ವರ್ಷ ವಯಸ್ಸಿನ ಛಾಯಾ(28) ಎಂದು ಗುರುತಿಸಲಾಗಿದೆ.

ಇವರು ಕೋಣನ ಹೊಸಹಳ್ಳಿ ಗ್ರಾಮದ ಸ್ವಾಮಿ ನಾಯಕ ಎಂಬುವರ ಪುತ್ರಿಯಾಗಿದ್ದು, ಈಗಾಗಲೇ 4 ವರ್ಷದ ಗಂಡು ಮಗುವಿದೆ. ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಎಚ್1 ಎನ್1 ತಗುಲಿ ಇವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತರ ಅಂತ್ಯಕ್ರಿಯೆ ಇಂದು ನಡೆದಿದ್ದು, ಗ್ರಾಮಕ್ಕೆ ಸ್ಥಳೀಯ ಶಾಸಕ ಹೆಚ್ ಪಿ ಮಂಜುನಾಥ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ :ಸರ್ಕಾರದ ಸವಲತ್ತು ಆಸೆಗಾಗಿ ಮದುವೆಯಾದ ಭೂಪ; ಕಿರುಕುಳದಿಂದ ನೇಣು ಬಿಗಿದುಕೊಂಡ ಪತ್ನಿ

ABOUT THE AUTHOR

...view details