ಮೈಸೂರು: ಚಲನಚಿತ್ರ ಗೀತೆ ರಚನೆಕಾರ ಹಂಸಲೇಖರ (Hamsalekha) ವಿರುದ್ಧ ಸಂಸದ ಪ್ರತಾಪಸಿಂಹ ( MP Pratap Simha) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪೇಜಾವರ ಶ್ರೀಗಳು( Pejavara shree) ಮಾಂಸ ತಿನ್ನುತ್ತಿದ್ರಾ? ಎಂಬ ಹಂಸಲೇಖರ ಹೇಳಿಕೆ ವಿಚಾರವಾಗಿ ಜಲದರ್ಶಿನಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಜನಾಭಿಪ್ರಾಯದ ವಿರುದ್ಧ ಮಾತಾನಾಡಿದ ನಂತರ ಕ್ಷಮೆಯಾಚಿಸುವ ಛಾಳಿ ಹೆಚ್ಚಾಗಿದೆ. ಹಂಸಲೇಖ ಅವರು ಪರಿಜ್ಞಾನದಿಂದ ಪೇಜಾವರರ ಶ್ರೀಗಳ ಬಗ್ಗೆ ಮಾತಾಡಬೇಕಿತ್ತು. ಪೇಜಾವರ ಶ್ರೀಗಳು ಬೇರೆ ಜಾತಿ ಸ್ವಾಮೀಜಿ ರೀತಿ ಅಲ್ಲ. ಕರ್ಮಠ ವ್ಯವಸ್ಥೆಯನ್ನು ಮೀರಿ ಸಮಾನತೆ ಸಾರಿದವರು ಎಂದರು.
ಹಂಸಲೇಖ ವಿರುದ್ಧ ಪ್ರತಾಪಸಿಂಹ ವಾಗ್ದಾಳಿ ಸಾಧು ಸಂತರ ಆಹಾರ ಪದ್ಧತಿ ಸಸ್ಯಹಾರ, ಮನಸ್ಸಿನ ತಾರತಮ್ಯ ತೆಗೆದು ಹಾಕಲು ಎಂದು ಹಂಸಲೇಖರಿಗೆ ತಿರುಗೇಟು ನೀಡಿದರು.
ಓದಿ:ಪೇಜಾವರ ಶ್ರೀಗಳ ಕುರಿತು ವಿವಾದಾತ್ಮಕ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ನಾದ ಬ್ರಹ್ಮ
ಪ್ರಗತಿಪರ ಅನ್ನಿಸಿಕೊಳ್ಳುವ ಗೀಳಿಗೆ ಬಿದ್ದು, ಪ್ರಚಾರಕ್ಕಾಗಿ ಹೀಗೆ ಮಾತಾಡುತ್ತಿದ್ದೀರಾ ಎಂದು ಹರಿಹಾಯ್ದರು. ಹಂಸಲೇಖ ಅವರು ಬಾಯಿ ತಪ್ಪಿನಿಂದ ಈ ರೀತಿ ಹೇಳಿದ್ದಾರೆ ಎಂದು ಅನ್ನಿಸುವುದಿಲ್ಲ. ಪ್ರಚಾರದ ಗೀಳಿಗೆ ಬಿದ್ದಾಗ ಅಸಂಬದ್ಧ ಮಾತು ಬರುತ್ತದೆ ಎಂದರು.
ಬಿಟ್ ಕಾಯಿನ್ ಆರೋಪ:
ರಾಜ್ಯದಲ್ಲಿ ಬಿಟ್ ಕಾಯಿನ್(Bitcoin) ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇಡಿಯವರು ಮಾಜಿ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಲಿ. ಬಿಟ್ ಕಾಯಿನ್ ಬಗ್ಗೆ ಮೊದಲು ಟ್ವೀಟ್ ಮಾಡಿದವರು ಸಿದ್ದರಾಮಯ್ಯ (siddaramaiah) ನಂತರ ಪ್ರಿಯಾಂಕಾ ಖರ್ಗೆ, ಸುರ್ಜೆವಾಲ ಸೇರಿ ಹಲವರು ಮಾತನಾಡಿದ್ದಾರೆ. ಇವರ ಬಳಿ ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಸಾಮಾನ್ಯ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುವಂತೆ ನಡೆಸಲಿ ಎಂದು ಹೇಳಿದರು.
ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಿ, ಕುಮಾರಸ್ವಾಮಿ ಸಹ ಜನಧನ್ (Jindhan) ಹಣ ಕದ್ದ ಬಗ್ಗೆ ಮಾತನಾಡಿದ್ದಾರೆ,ಅವರಿಗೂ ಇಡಿ ನೋಟಿಸ್ ನೀಡಲಿ. ಈ ಎಲ್ಲಾ ನಾಯಕರು ತನಿಖೆಗೆ ಸಹಕರಿಸಲಿ. ಈ ನಾಯಕರ ಬಳಿ ಇರುವ ಸಾಕ್ಷಿ, ಮಾಹಿತಿಗಳಿಂದ ತನಿಖೆ ಮುಂದುವರಿಯಲಿ ಎಂದು ಸವಾಲು ಹಾಕಿದರು.