ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಉದ್ಯಾನದ ಹೆಸರು ಬದಲಾವಣೆ ಸಮರ್ಥಿಸಿಕೊಂಡ ಸಂಸದ ಪ್ರತಾಪ್ ಸಿಂಹ - ರಾಷ್ಟ್ರೀಯ ಉದ್ಯಾನವನ ಹೆಸರು ಬದಲಾವಣೆ ಸಮರ್ಥಿಸಿಕೊಂಡ ಸಂಸದ ಪ್ರತಾಪಸಿಂಹ

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ‌ಭಾರತದ ಮೊದಲ ಲೆಫ್ಟಿನೆಂಟ್ ಜನರಲ್. ಸ್ಥಳೀಯವಾಗಿಯೂ ಅವರ ಹೆಸರು ಸೂಕ್ತ. ಅವರಿಗೆ ಗೌರವ ಸೂಚಿಸುವ ಭಾಗವಾಗಿ ಹೆಸರು ಬದಲಾವಣೆ ಮಾಡುತ್ತೇವೆ. ಕಾಂಗ್ರೆಸ್‌ನವರಂತೆ ನಾವು ನಮ್ಮ ಪಕ್ಷದವರ ಹೆಸರನ್ನ ಇಡುತ್ತಿಲ್ಲ ಎಂದು ಕುಟುಕಿದರು.

prathap-simha
ಸಂಸದ ಪ್ರತಾಪ್ ಸಿಂಹ

By

Published : Sep 8, 2021, 2:20 PM IST

ಮೈಸೂರು:ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ಹೆಸರು ಬದಲಾವಣೆಯನ್ನ ಸಂಸದ ಪ್ರತಾಪಸಿಂಹ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿಗೂ ರಾಷ್ಟ್ರೀಯ ಉದ್ಯಾನವನಕ್ಕೂ ಏನು ಸಂಬಂಧ? ಸಂಬಂಧವೇ ಇಲ್ಲದವರನ್ನು ಅನೇಕ ಕೇಂದ್ರ ಹಾಗೂ ಸಂಸ್ಥೆಗಳಿಗೆ ಹೆಸರಿಡಲಾಗಿದೆ. ಹೀಗಾಗಿ ಇದನ್ನ ಬದಲಾಯಿಸಲು ಮುಂದಾಗಿದ್ದೇವೆ ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ‌ಭಾರತದ ಮೊದಲ ಲೆಫ್ಟಿನೆಂಟ್ ಜನರಲ್ ಆಗಿದ್ದವರು ಹಾಗೂ ಸ್ಥಳೀಯವಾಗಿಯೂ ಅವರ ಹೆಸರು ಸೂಕ್ತ. ಅವರಿಗೆ ಗೌರವ ಸೂಚಿಸುವ ಭಾಗವಾಗಿ ಹೆಸರು ಬದಲಾವಣೆ ಮಾಡುತ್ತೇವೆ. ಕಾಂಗ್ರೆಸ್‌ನವರಂತೆ ನಾವು ನಮ್ಮ ಪಕ್ಷದವರ ಹೆಸರನ್ನ ಇಡುತ್ತಿಲ್ಲ ಎಂದು ಕುಟುಕಿದರು.

ರಾಷ್ಟ್ರೀಯ ಉದ್ಯಾನವನ ಹೆಸರು ಬದಲಾವಣೆ ಸಮರ್ಥಿಸಿಕೊಂಡ ಸಂಸದ ಪ್ರತಾಪ್ ಸಿಂಹ

ಸೋನಿಯಾ ಗಾಂಧಿ ಓಲೈಸಲು ಕಾಂಗ್ರೆಸ್ ಎಲ್ಲದಕ್ಕೂ ರಾಜೀವ್ ಗಾಂಧಿ ಹೆಸರು ಬಳಸಿತ್ತು. ನಮಗೆ ಆ ರೀತಿ ಅನಿವಾರ್ಯತೆ ಏನೂ ಇಲ್ಲ. ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರು ಇಡುತ್ತಿದ್ದೇವೆ. ರೈಲ್ವೆ ನಿಲ್ದಾಣಕ್ಕೂ ರಾಜ ಮನೆತನದವರ ಹೆಸರು ಇಡುತ್ತಿದ್ದೇವೆ. ನಾವು ಸಕಾರಣದೊಂದಿಗೆ ಹೆಸರು ಇಡುತ್ತೇವೆ ವಿನಃ ಯಾರನ್ನೋ ಓಲೈಸಲು ಅಲ್ಲ ಎಂದರು.

ಇದನ್ನೂ ಓದಿ:"ಎಸಿಬಿಗೆ ದಾಳಿಗೆ ಕಾರಣ ನೀನೇ": ನೆರೆಮನೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ನಗರಸಭೆಯ ಯೋಜನಾ ನಿರ್ದೇಶಕ!

ABOUT THE AUTHOR

...view details