ಮೈಸೂರು: ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕೆಆರ್‌ಎಸ್ ರಸ್ತೆಯಲ್ಲಿರುವ ಬ್ರಿಗೇಡ್ ಅಪಾರ್ಟ್ಮೆಂಟ್ನಿಂದ ರಾಯಲ್ ಇನ್ ಹೋಟೆಲ್ ವರೆಗೆ ಫ್ಲೈಓವರ್ ನಿರ್ಮಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಂಸದ ಪ್ರತಾಪ್ ಸಿಂಹ ಸ್ಥಳ ಪರಿಶೀಲನೆ ನಡೆಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2016-17ರ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಕೆಆರ್‌ಎಸ್ ರಸ್ತೆಯ ರೈಲ್ವೆ ಹಳಿಗೆ ಓವರ್ ಬ್ರಿಡ್ಜ್ ಮಾಡಲು ಅನುಮೋದನೆ ಸಿಕ್ಕಿತ್ತು. ಆದರೆ, ಆಗ ರಿಂಗ್ ರಸ್ತೆ ನಗರಾಭಿವೃದ್ಧಿ ಮುಡಾ ನಿಯಂತ್ರಣದಲ್ಲಿತ್ತು. ಮುಂದಿನ ಹಂತ ಪಿಡಬ್ಲ್ಯೂಡಿ ಮತ್ತು ನಗರಪಾಲಿಕೆ ನಿಯಂತ್ರಣದಲ್ಲಿತ್ತು. ಹಾಗಾಗಿ ರೈಲ್ವೆ, ಮುಡಾ, ನಗರಪಾಲಿಕೆ, ಪಿಡಬ್ಲ್ಯೂಡಿ ಈ ನಾಲ್ಕು ಇಲಾಖೆ ಸೇರಿ ಒಂದೇ ಒಂದು ಫ್ಲೈ ಓವರ್ ಓವರ್ ಮಾಡಬೇಕಿತ್ತು. ಆದರೆ ಇಲಾಖೆಗಳಲ್ಲಿನ ಹೊಂದಾಣಿಕೆ ಕೊರತೆಯಿಂದಾಗಿ ಇದು ಆಗಿರಲಿಲ್ಲ ಎಂದರು.
ಕೊನೆಗೆ ಅದನ್ನು ರೈಲ್ವೆ ಅಂಡರ್ ಪಾಸ್ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ, ರೈಲ್ವೆ ಅಂಡರ್ ಪಾಸ್ ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಮೊದಲಿನ ಯೋಜನೆಯಂತೆ ಫ್ಲೈ ಓವರ್ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.