ಕರ್ನಾಟಕ

karnataka

ETV Bharat / state

ಪೋಸ್ಟರ್​​ಗಳಲ್ಲಿ ಹುಲಿ ಚಿತ್ರಗಳನ್ನ ಹಾಕಿಬಿಟ್ರೆ ಟಿಪ್ಪು ಮೈಸೂರು ಹುಲಿನಾ ?: ಪ್ರತಾಪ್​ ಸಿಂಹ ಪ್ರಶ್ನೆ

ಟಿಪ್ಪು ಸುಲ್ತಾನ್ ಯುದ್ಧ ಮಾಡದೇ ಸಂಧಾನಕ್ಕೆ ಕಳುಹಿಸಿದ್ದ. ಟಿಪ್ಪು ಸುಲ್ತಾನ್ ಕೋಟೆಯೊಳಗೆ ಸತ್ತಿದ್ದು, ಹುಲಿ ಎಂದಿಗೂ ಬೋನ್ ನಲ್ಲಿ ಸಾಯುವುದಿಲ್ಲ. ನಾಲ್ಕನೇ ಆಗ್ಲೋ ಮೈಸೂರು ಯುದ್ಧದಲ್ಲಿ ಹುಲಿ ಎಲ್ಲಿತ್ತು. ಕೋಟೆಯೊಳಗೆ ಸತ್ತು ಬಿದ್ದಿತ್ತು. ಯಾರಾದರೂ ಹುಲಿಯೊಂದಿಗೆ ಯುದ್ಧ ಮಾಡಲು ಸಾಧ್ಯವೇ ಎಂದು ಪ್ರತಾಪ್​ ಸಿಂಹ ಕುಹಕವಾಡಿದ್ದಾರೆ.

Pratap Simha who spoke about Tipu Sultan
Pratap Simha who spoke about Tipu Sultan

By

Published : May 19, 2022, 8:52 PM IST

Updated : May 19, 2022, 9:44 PM IST

ಮೈಸೂರು: ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಮೈಸೂರು ಹುಲಿ ಎಂಬ ಟೈಟಲ್ ತೆಗೆದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್​ ಸಿಂಹ, 3ನೇ ಮತ್ತು 4ನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಹೋರಾಟ ಮಾಡಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.

ಟಿಪ್ಪು ಸುಲ್ತಾನ್ ಯುದ್ಧ ಮಾಡದೇ ಸಂಧಾನಕ್ಕೆ ಕಳುಹಿಸಿದ್ದ. ಟಿಪ್ಪು ಸುಲ್ತಾನ್ ಕೋಟೆಯೊಳಗೆ ಸತ್ತಿದ್ದು, ಹುಲಿ ಎಂದಿಗೂ ಬೋನ್ ನಲ್ಲಿ ಸಾಯುವುದಿಲ್ಲ. ನಾಲ್ಕನೇ ಆಗ್ಲೋ ಮೈಸೂರು ಯುದ್ಧದಲ್ಲಿ ಹುಲಿ ಎಲ್ಲಿತ್ತು. ಕೋಟೆಯೊಳಗೆ ಸತ್ತು ಬಿದ್ದಿತ್ತು. ಯಾರಾದರೂ ಹುಲಿಯೊಂದಿಗೆ ಯುದ್ಧ ಮಾಡಲು ಸಾಧ್ಯವೇ ಎಂದು ಕುಹಕವಾಡಿದ್ದಾರೆ.

ನಾಲ್ವಡಿಯವರೇ ಮೈಸೂರು ಹುಲಿ:ಎಂದೆಂದಿಗೂ ಮೈಸೂರು ಹುಲಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರೆ. ಯಾರೋ ನಾಲ್ಕು ಜನ ಟಿಪ್ಪು ಸುಲ್ತಾನ್ ಹುಲಿ ಎಂದ ಮಾತ್ರ ಅದು ಸಾಧ್ಯವೇ?. ಟಿಪ್ಪು ಸುಲ್ತಾನ್ ಮೈಸೂರು ಹುಲಿ ಅಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಹುಲಿ. ನಾಲ್ವಡಿ ಅವರು ಕೆ.ಆರ್.ಎಸ್. ಕಟ್ಟಿಸಿದ್ದಾರೆ, ಬೆಂಗಳೂರಿಗೆ ಕರೆಂಟ್ ಕೊಟ್ಟಿದ್ದಾರೆ, ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿದ್ದಾರೆ ಎಂದರು.

ಪೋಸ್ಟರ್​​ಗಳಲ್ಲಿ ಹುಲಿ ಚಿತ್ರಗಳನ್ನ ಹಾಕಿಬಿಟ್ರೆ ಟಿಪ್ಪು ಮೈಸೂರು ಹುಲಿನಾ ?: ಪ್ರತಾಪ್​ ಸಿಂಹ ಪ್ರಶ್ನೆ

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆದ್ರೆ ದಲಿತರ ಸಾಲ ಮನ್ನಾ ಮಾಡುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಯಾವ ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬುದು ನನಗ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಡಾ.ಜಿ ಪರಮೇಶ್ವರ್ ಸಿಎಂ ಆಗುವುದನ್ನ ತಪ್ಪಿಸಿದರು. ಅವರು ಅಂಗಲಾಚಿದರು ಮಂತ್ರಿ ಸ್ಥಾನವನ್ನೂ ಸಹ ಕೊಡಲಿಲ್ಲ. ಕೋಲಾರದಲ್ಲಿ ಮುನಿಯಪ್ಪ ಹಾಗೂ ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯರನ್ನ ಸೋಲಿಸಿದ್ದೇ ಸಿದ್ದರಾಮಯ್ಯ. ಸಿದ್ದರಾಮಯ್ಯನವರಿಗೆ ಮುಸ್ಲಿಂರಿಗೆ ಬಗ್ಗೆ ಮಾತ್ರ ವಿಶೇಷ ಕಾಳಜಿ ಇದೆಯೇ ಹೊರತು ದಲಿತ ಸಮಾಜದ ಮೇಲಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ: ಆರೋಪಿಗಳ ಮನೆ ಕೆಡವಿದ 'ಬುಲ್ಡೋಜರ್'

Last Updated : May 19, 2022, 9:44 PM IST

For All Latest Updates

TAGGED:

ABOUT THE AUTHOR

...view details