ಕರ್ನಾಟಕ

karnataka

ETV Bharat / state

ನಿಜಾಮುದ್ದೀನ್‌ಗೆ ಹೋಗಿದ್ದವರು ಮಾಹಿತಿ ನೀಡಿ ಪುಣ್ಯ ಕಟ್ಟಿಕೊಳ್ಳಿ: ಸಂಸದ ಪ್ರತಾಪ್ ಸಿಂಹ - ನಿಜಾಮುದ್ದೀನ್​ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್​ ಸಿಂಹ

ದೆಹಲಿಯ ನಿಜಾಮುದ್ದೀನ್ ಮಸೀದಿಗೆ ರಾಜ್ಯದಿಂದ ತೆರಳಿದ್ದವರು ಧರ್ಮ ಪ್ರಚಾರಕ್ಕೆ ಹೋಗಿದ್ದವರು ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.

Pratap simha
ಪ್ರತಾಪ್​ ಸಿಂಹ

By

Published : Apr 2, 2020, 4:42 PM IST

ಮೈಸೂರು: ನೀವೇನು ಘನಕಾರ್ಯ ಮಾಡಲು ಅಲ್ಲಿಗೆ ಹೋಗಿರಲಿಲ್ಲ. ನೀವು ಧರ್ಮಾಂಧತೆಯನ್ನು ತುಂಬಲು ಅಲ್ಲಿಗೆ ಹೋಗಿದ್ದೀರಿ. ಈ ವಿಚಾರ ನಮಗೂ ಗೊತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ದೆಹಲಿಯ ಧರ್ಮ ಸಭೆಗೆ ಹೋಗಿದ್ದವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್​ ಸಿಂಹ

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯ ನಿಜಾಮುದ್ದೀನ್ ಮಸೀದಿಗೆ ರಾಜ್ಯದಿಂದ ತೆರಳಿದ್ದವರು ಧರ್ಮದ ಪ್ರಚಾರಕ್ಕೆ ಹೋಗಿದ್ದರು. ಪ್ರಧಾನಿ‌ ಮೋದಿ ನಿಮಗೆ ಒಳ್ಳೆಯದನ್ನೇ ಮಾಡುತ್ತಿದ್ದು, ಧರ್ಮ ಮೀರಿ ಕೆಲಸ ಮಾಡುತ್ತಿದ್ದಾರೆ. ನೀವು ಯಾರೆಲ್ಲಾ ಹೋಗಿದ್ರಿ ಎಂಬ ಮಾಹಿತಿಯನ್ನಷ್ಟೇ ನೀಡಿ ಎಂದರು.

ನಿಮಗೆ ಎಲ್ಲಾ‌ ರೀತಿಯ ಊಟ ವಸತಿಯ ವ್ಯವಸ್ಥೆ ಮಾಡುತ್ತೇವೆ. ಬೇರೆ ಏನನ್ನೂ ನಿಮ್ಮಿಂದ ಕೇಳುತ್ತಿಲ್ಲ. ಬೇರೆಯವರಿಗೆ ವೈರಸ್ ಹರಡಬೇಡಿ ಎಂದರು.

ABOUT THE AUTHOR

...view details