ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ ಜಾಣ್ಮೆಯ ಉತ್ತರ ನೀಡಿ ಜಾರಿಕೊಂಡಿದ್ದಾರೆ.
ಸಂಸದ ಪ್ರತಾಪಸಿಂಹ ಸುದ್ದಿಗೋಷ್ಠಿ ರಾತ್ರಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರನ್ನು ಬದಲಾವಣೆ ಮಾಡಿದ್ದು, ಈಗ ಹಲವು ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಪತ್ರಕರ್ತರು ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀವೇ ಪತ್ರಕರ್ತರು ಅದನ್ನು ನೀವೇ ಹೇಳ್ಬೇಕು ಅಂದ್ರು. ಎಂಪಿ ಪ್ರತಾಪ್ ಸಿಂಹ ಕೆಲಸ ಮಾಡುತ್ತಿದ್ದಾರಾ ಇಲ್ಲ ಅಂತಾ ಹೇಳೋದು ನೀವೇ. ಮಿನಿಸ್ಟರ್ ಕೆಲಸ ಮಾಡುತ್ತೀದ್ದಾರಾ ಇಲ್ವಾ ಅಂತಾ ಹೇಳೋದು ನೀವೇ. ಹೀಗಾಗಿ ಈ ಬಗ್ಗೆ ನೀವೇ ಹೇಳಬೇಕು. ನಾನು ನನ್ನ ಬಗ್ಗೆ ಹೇಳಬೇಕು ಅಂದರೆ ನಾನು ಆಕ್ಟಿವ್ ಆಗಿ ಇದ್ದೇನೆ ಅಂತಾ ಹೇಳ್ಕೋತ್ತಿನಿ, ಅದನ್ನು ಅನಲೈಸ್ ಮಾಡೋದು ನಿಮಗೆ ಬಿಟ್ಟಿದ್ದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.