ಮೈಸೂರು: ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರಿಗೆ ತಲೆ ಸರಿ ಇಲ್ಲವೆಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಗೆ ಕಿವಿ ಕೇಳಿಸಲ್ಲ, ಕಣ್ಣು ಕಾಣಿಸಲ್ಲ ಎಂಬ ವಿಶ್ವನಾಥ್ ಹೇಳಿಕೆ ವಿಚಾರವಾಗಿ, ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಶ್ವನಾಥ್ ಅವರಿಗೆ ಮಂತ್ರಿಸ್ಥಾನ ನೀಡಲಿಲ್ಲ ಎಂದು ಹೀಗೆ ಒಬ್ಬ ವ್ಯಕ್ತಿಯ ಬಗ್ಗೆ ಹಗುರವಾಗಿ ಮಾತನಾಡಿದರೆ ಅದು ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರು ಸ್ವತ: ಕೊರೊನಾ ಬಂದ ಸಂದರ್ಭದಲ್ಲಿ 5ನೇ ದಿನಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ, ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದ್ದರಿಂದ ಕೊರೊನಾ ಕರ್ಫ್ಯೂ ಘೋಷಣೆ ಮಾಡಿ ಪ್ರತಿ ಜಿಲ್ಲೆಗೂ ಉಸ್ತುವಾರಿಗಳನ್ನು ಕಳುಹಿಸಿದ್ದಾರೆ. ಜನರ ಕಷ್ಟವನ್ನು ನೋಡಿ ಕೆಲಸ ಮಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರ, ಕೂಲಿ ಕಾರ್ಮಿಕರ, ಕಷ್ಟ-ಸುಖಗಳಿಗೆ ಸ್ಪಂದಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪ್ರತಾಪ್ ಸಿಂಹ ಅವರು ವಿಶ್ವನಾಥ್ಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ.. ಸಿಎಂಗೆ ಕಣ್ಣು ಕಾಣಿಸೋದಿಲ್ಲ, ಕಿವಿನೂ ಕೇಳಿಸಲ್ಲ, ನಿಮ್ಮನ್ನ ಕಟ್ಟಿಕೊಂಡು ನಾವೇನು ಮಾಡೋಣ : ಹೆಚ್ ವಿಶ್ವನಾಥ್ ಕಿಡಿ
ರಾಜ್ಯದ ಬಗ್ಗೆ ಇಷ್ಟೊಂದು ಸಂವೇದನೆ ಇರುವ, ಜನರ ಬಗ್ಗೆ ಕಾಳಜಿ ತೋರುವ ಸಿಎಂಗೆ ಕಣ್ಣು ಕಾಣಿಸಲ್ಲ, ಕಿವಿ ಕೇಳಿಸಲ್ಲ ಎಂದು ಹೇಳುವ ವ್ಯಕ್ತಿಗೆ ತಲೆ ಸರಿ ಇಲ್ಲ ಎಂದರ್ಥ ಎಂದು ಸಂಸದರು ಗರಂ ಆದರು.