ಮೈಸೂರು : ಈ ಬಾರಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯೂ ಹೀನಾಯವಾಗಿ ಸೋತಿದೆ. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದ ಮೂಲಕ ಪಕ್ಷಕ್ಕಾಗಿ ಹಗಲಿರುಳೆನ್ನದೆ ದುಡಿದ ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ತಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಈ ಬಾರಿ ಚುನಾವಣೆಯನ್ನು ಗೆಲ್ಲುವ ವಿಶ್ವಾಸ ಹೊಂದಿತ್ತು.
ಇದನ್ನೂ ಓದಿ :ಮೈಸೂರು ಜಿಲ್ಲೆಯಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ : ಆಕಾಂಕ್ಷಿಗಳು ಯಾರ್ಯಾರು ?
ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರು ಸಹ ಮನೆ ಮಠವನ್ನು ತ್ಯಜಿಸಿ , ಹಗಲಿರುಳೆನ್ನದೇ ದಿನವೆಲ್ಲ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದರು. ನಮ್ಮ ಪಕ್ಷದ ಕಾರ್ಯಕರ್ತರೇ ನಮಗೆ ಶಕ್ತಿ, ಗೆದ್ದಾಗ ಹೊತ್ತು ಮೆರೆಸುವವರು ಅವರಿಗೆ ಸೋತಾಗ ನಮ್ಮ ಮೇಲೆ ತೀಕ್ಷ್ಣವಾಗಿ ಸಿಟ್ಟನ್ನು ಹೊರಹಾಕುವ ಅಧಿಕಾರವೂ ಸಹ ಅವರಿಗಿದೆ ಎಂದು ಪ್ರತಾಪ್ ಸಿಂಹ ಟ್ವೀಟ್ ನಲ್ಲಿ ಹೇಳಿದ್ದಾರೆ.
ಅಪಾಯಕ್ಕೆ ಸಿಲುಕಿರುವುದು ಕಾರ್ಯಕರ್ತರೇ ಹೊರತು ನಾಯಕನಲ್ಲ :ಬಿಜೆಪಿ ಪಕ್ಷ ಸೋತಿರುವುದರಿಂದ ಅನಾಥರಾಗಿರುವುದು ನಮ್ಮ ಪಕ್ಷದ ಕಾರ್ಯಕರ್ತರುಗಳು ಮಾತ್ರ, ಯಾವುದೇ ನಾಯಕರು ಅನಾಥರಾಗಿಲ್ಲ. ಈ ಸೋಲಿನಿಂದ ಯಾವ ನಾಯಕನೂ ಅಪಾಯಕ್ಕೆ ಸಿಲುಕಿಲ್ಲ, ಅಪಾಯಕ್ಕೆ ಸಿಲುಕಿರುವುದು ಸಾಮಾನ್ಯ ಕಾರ್ಯಕರ್ತರು. ಕಾರ್ಯಕರ್ತರೇ ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಿದ್ದಾರೆ.