ಕರ್ನಾಟಕ

karnataka

ETV Bharat / state

ಮೋದಿ ಸರ್ಕಾರದ ಜನಪ್ರಿಯ ಕೆಲಸ ಸಹಿಸದೇ ಬಂದ್​ಗೆ ಕರೆ: ಸಂಸದ ಪ್ರತಾಪ್​ ಸಿಂಹ - Pratap sihma Reaction about Bharat Band

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಕೆಲಸಗಳನ್ನು ಸಹಿಸದವರು ಭಯದಿಂದ ಬಂದ್​ಗೆ ಕರೆ ಕೊಟ್ಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

ಭಾರತ್ ಬಂದ್ ಕುರಿತು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ, Pratap sihma Reaction about Bharat Band
ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ

By

Published : Jan 8, 2020, 12:51 PM IST

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಕೆಲಸಗಳನ್ನು ಸಹಿಸದವರು ಭಯದಿಂದ ಬಂದ್​ಗೆ ಕರೆ ಕೊಟ್ಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ

ಇಂದು ಭಾರತ್ ಬಂದ್ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಕಾರ್ಯಕ್ರಮ ಹಾಗೂ ಜನೋಪಯೋಗಿ ಕಾರ್ಯಕ್ರಮಗಳಾದ ತ್ರಿವಳಿ ತಲಾಖ್, 377ನೇ ವಿಧಿ ರದ್ದು ಹಾಗೂ ರಾಮ ಜನ್ಮಭೂಮಿ,‌ ಪೌರತ್ವ ಕಾಯ್ದೆ ಮುಂತಾದ ಕೆಲಸಗಳಿಂದ ಭಯಭೀತರಾಗಿರುವ ವಿರೋಧ ಪಕ್ಷದವರು ವಿದ್ಯಾರ್ಥಿಗಳು ಹಾಗೂ ಅಲ್ಪಸಂಖ್ಯಾತರ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಇದೇ ಭಯದಿಂದ ಬಂದ್ ಮಾಡಿಸುತ್ತಿದ್ದಾರೆ. ಇದೆಲ್ಲ ನಮ್ಮ ದೇಶದಲ್ಲಿ ನಡೆಯುವುದಿಲ್ಲ. ಕಲ್ಲು ಹೊಡೆದು ಸರ್ಕಾರಿ ಆಸ್ತಿ-ಪಾಸ್ತಿ ನಾಶ ಮಾಡುವವರ ವಿರುದ್ಧ ಉತ್ತರ ಪ್ರದೇಶದಲ್ಲಿ ಕ್ರಮ ಕೈಗೊಂಡಂತೆ ಇಲ್ಲಿಯು ಕ್ರಮ ಕೈಗೊಳ್ಳಬೇಕೆಂದು ಸಿಎಂ ಯಡಿಯೂರಪ್ಪ ಅವರ ಬಳಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ಜೊತೆಗೆ ಜೆಎನ್​ಯು ವಿಶ್ವವಿದ್ಯಾಲಯದ ಗಲಾಟೆಯ ಹಿಂದೆ ಕೆಲವು ವ್ಯಕ್ತಿಗಳಿದ್ದಾರೆ. ಇದರಲ್ಲಿ ಎಬಿವಿಪಿ ಇಲ್ಲ. ಅಲ್ಲಿಯ ಗಲಾಟೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಜೆಎನ್​ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಸಿನಿಮಾ ನಟ, ನಟಿಯರು ಬೆಂಬಲ ನೀಡುತ್ತಿರುವುದು ಸರಿಯಲ್ಲ ಎಂದರು.

ABOUT THE AUTHOR

...view details