ಕರ್ನಾಟಕ

karnataka

ETV Bharat / state

ಹರ್ ಘರ್ ತಿರಂಗಾ ಅದ್ಭುತ ಪರಿಕಲ್ಪನೆ, ಅದನ್ನು ಸಾಕಾರಗೊಳಿಸುವಲ್ಲಿ ಸರ್ಕಾರ ತಪ್ಪು ಮಾಡಿದೆ: ರಂಗಕರ್ಮಿ ಪ್ರಸನ್ನ - ಮೈಸೂರಿನಲ್ಲಿ ರಂಗಕರ್ಮಿ ಪ್ರಸನ್ನ ಇಂಟರ್​ವ್ಯೂವ್​

ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಹಬ್ಬವನ್ನು ಆಚರಿಸುತ್ತಿದ್ದೇವೆ. ಅದೇ ಹರ್ ಘರ್ ತಿರಂಗಾ, ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಿ ಸಂತೋಷ ಪಡುವ ಅದ್ಭುತ ಪರಿಕಲ್ಪನೆಯಾಗಿದೆ. ಆದರೆ, ಇದನ್ನು ಸಾಕಾರಗೊಳಿಸುವಾಗ ಸರ್ಕಾರ ದೊಡ್ಡ ಪ್ರಮಾದ ಮಾಡಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಅವರು 'ಈಟಿವಿ ಭಾರತ'ಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರಂಗಕರ್ಮಿ ಪ್ರಸನ್ನ
ರಂಗಕರ್ಮಿ ಪ್ರಸನ್ನ

By

Published : Aug 1, 2022, 8:03 PM IST

ಮೈಸೂರು:ಅಮೃತಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅದ್ಭುತ ಪರಿಕಲ್ಪನೆ. ಆದರೆ, ಅದನ್ನು ಸಾಕಾರಗೊಳಿಸುವಲ್ಲಿ ಸರ್ಕಾರ ತಪ್ಪು ಮಾಡಿದ್ದು, ಅದನ್ನು ಮುಂದಿನ ಬಾರಿಯಾದರೂ ಸರಿಪಡಿಸಿಕೊಳ್ಳಲಿ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಅವರು 'ಈಟಿವಿ ಭಾರತ' ನೀಡಿರುವ ವಿಶೇಷ ಸಂದರ್ಶನದ ಮೂಲಕ ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದಾರೆ.

ರಂಗಕರ್ಮಿ ಪ್ರಸನ್ನ ಅವರೊಂದಿಗೆ ವಿಶೇಷ ಸಂದರ್ಶನ

ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಹಬ್ಬವನ್ನು ಆಚರಿಸುತ್ತಿದ್ದೇವೆ. ಅದೇ 'ಹರ್ ಘರ್ ತಿರಂಗಾ'. ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಿ ಸಂತೋಷ ಪಡುವ ಅದ್ಭುತ ಪರಿಕಲ್ಪನೆಯಾಗಿದೆ. ಆದರೆ, ಇದನ್ನು ಸಾಕಾರಗೊಳಿಸುವಾಗ ಸರ್ಕಾರ ದೊಡ್ಡ ಪ್ರಮಾದ ಮಾಡಿದೆ. ಅದನ್ನು ತಿಳಿದೋ ತಿಳಿಯದೆಯೋ ಮಾಡಿದ್ದೋ ಗೊತ್ತಿಲ್ಲ ಎಂದರು.

ಹರ್ ಘರ್ ತಿರಂಗಾ ಎನ್ನುವುದಕ್ಕೆ ಒಂದು ಚರಿತ್ರೆಯೇ ಇದೆ. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎಂಬ ಘೋಷಣೆ ಹಿನ್ನೆಲೆ ಅಂದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮೇಲೆ ಭಾರತದ ಧ್ವಜ ಹಾರಿಸಿ ಎಂಬ ಕೂಗು ಕೇಳಿಬಂದಿತ್ತು. ಆದರೆ, 75 ವರ್ಷದ ನಂತರ ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ಪುನಃ ತಿಳಿದೋ ತಿಳಿಯದೆಯೋ ವಿದೇಶದಿಂದ ತಯಾರಾದ ಅಥವಾ ಇಲ್ಲಿ ಪರಿಸರಕ್ಕೆ ಹಾನಿಯಾಗುವ ಸಿಂಥೆಟಿಕ್ ಧ್ವಜಗಳನ್ನು ಹಾರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಖಾದಿ ಬಾವುಟ ಹಾರಿಸಿ ಎಂದಿದ್ದರೆ ಇಲ್ಲಿನ ನೇಕಾರರಿಗೆ, ಬಡವರಿಗೆ ಬದುಕು ಆಗುತ್ತಿತ್ತು. ಮತ್ತೆ ಪ್ರಧಾನಮಂತ್ರಿ ಅವರಿಗೆ ಮನವಿ ಮಾಡುತ್ತೇವೆ. ಹರ್ ಘರ್ ತಿರಂಗಾ ಒಳ್ಳೆಯ ಯೋಜನೆ. ಆದರೆ, ಅದನ್ನು ಕಾರ್ಯರೂಪಕ್ಕೆ ತರುವಾಗ ತಿಳಿದೋ ತಿಳಿಯದೆಯೋ ಎಡವಟ್ಟು ಮಾಡಿದ್ದೀರಿ. ಈ ವರ್ಷದ ಕಡಿಮೆ ಸಮಯದ ಕಾರಣ ಖಾದಿ ಬಾವುಟಗಳ ಕಡ್ಡಾಯ ಕಷ್ಟ. ಕೊನೆಯ ಪಕ್ಷ ಮುಂದಿನ ಬಾರಿ ನಿಮ್ಮ ನಿಮ್ಮ ಪಕ್ಷದ ಕಚೇರಿಗಳ ಮೇಲಾದರೂ ಖಾದಿ ಬಾವುಟ ಹಾರಿಸಿದರೆ ಒಳ್ಳೆಯ ಕೆಲಸ ಆಗುತ್ತದೆ. ಆ ಮೂಲಕ ಇಲ್ಲಿನ ಬಡ ಜನರಿಗೆ, ನೇಕಾರರಿಗೆ ಸಹಾಯವಾಗುತ್ತದೆ. ಈ ಬಗ್ಗೆ ಯೋಚನೆ ಮಾಡಬೇಕು ಎನ್ನುವುದು ರಂಗಕರ್ಮಿ ಪ್ರಸನ್ನ ಅವರ ಆಶಯ.

ಓದಿ:ದೊಡ್ಡಬಳ್ಳಾಪುರ ಗಡಿಭಾಗದಲ್ಲಿ ಅಕ್ರಮ ಮರಳುಗಾರಿಕೆ: 'ದಂಧೆಗೆ ಪೊಲೀಸರ ಸಾಥ್‌'

ABOUT THE AUTHOR

...view details