ಮೈಸೂರು: 3ನೇ ಹಂತದ ಕೊರೊನಾ ಲಸಿಕೆ ಅಭಿಯಾನಕ್ಕೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಯದುವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಿದ್ದಾರೆ. ಈ ವೇಳೆ, ನೃತ್ಯಗಾರ್ತಿ ವಸುಂಧರ ದೊರೆಸ್ವಾಮಿ ಹಾಗೂ ಹೊಸಮಠದ ಅಧ್ಯಕ್ಷ ಶ್ರೀ ಚಿದಾನಂದ ಸ್ವಾಮೀಜಿ ಅವರಿಗೆ ಮೊದಲ ಲಸಿಕೆ ನೀಡಲಾಗಿದೆ.
ಬಳಿಕ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಇಂದು ಕೇವಲ ಉದ್ಘಾಟನೆ ಮಾಡುತ್ತಿದ್ದೇನೆ. ಮುಂದಿನ ದಿನದಲ್ಲಿ ನಾನು ಸಹ ಲಸಿಕೆ ತೆಗೆದುಕೊಳ್ಳುತ್ತೇನೆ ಎಂದರು. ಖಾಸಗಿ ಆಸ್ಪತ್ರೆಯಲ್ಲಿ ಒಂದು ಲಸಿಕೆಗೆ 250 ರೂ. ನಿಗದಿ ಮಾಡಲಾಗಿದೆ. ಲಸಿಕೆ ಪಡೆಯಲು ಹಣ ಇಲ್ಲದೇ ಇರುವವರಿಗೆ ನಾನು ಶುಲ್ಕ ಭರಿಸುತ್ತೇನೆ.