ಕರ್ನಾಟಕ

karnataka

ETV Bharat / state

ಹೆಲಿಟೂರಿಸಂ ವಿರೋಧಿಸಿ ಅರಣ್ಯ ಇಲಾಖೆಗೆ ಪತ್ರ ಬರೆದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್

ಲಲಿತ್ ಮಹಲ್ ಅರಮನೆ ಮುಂಭಾಗದ ಕಿರು ಅರಣ್ಯದ 600ಕ್ಕೂ ಅಧಿಕ ಮರಗಳನ್ನು ಕಡಿದು ಪ್ರವಾಸೋದ್ಯಮ ಇಲಾಖೆ ಹೆಲಿ ಟೂರಿಸಂ ಮಾಡಲು ಮುಂದಾಗಿರುವ ಬಗ್ಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.

Pramoda Devi Wodeyar wrote letter to forest department news
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್

By

Published : Apr 18, 2021, 10:22 AM IST

ಮೈಸೂರು: ಹೆಲಿಟೂರಿಸಂಗೆ ಹೆಲಿಪ್ಯಾಡ್ ನಿರ್ಮಾಣ ವಿಚಾರವಾಗಿ ಅರಣ್ಯ ಇಲಾಖೆಗೆ ಪತ್ರ ಬರೆದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪತ್ರ

ಮರ ಕಡಿಯಲು ಸಾರ್ವಜನಿಕ ಆಕ್ಷೇಪಣ ಅರ್ಜಿ ಕರೆದಿರುವುದು ಕಾನೂನು ಬಾಹಿರವಾಗಿದೆ‌‌. ಮರಗಳ ಹರಣಕ್ಕೆ ಗುರುತು ಮಾಡಿರುವ ಜಾಗ ನಮಗೆ ಸೇರಿದ್ದು. ಈ ಬಗ್ಗೆ ಹೈಕೋರ್ಟ್​ನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂದರ್ಭದಲ್ಲಿ ಆ ಜಾಗದಲ್ಲಿ ಮರ ಕಡಿಯಲು ಸಾರ್ವಜನಿಕ ಆಕ್ಷೇಪಣ ಅರ್ಜಿ ಹೇಗೆ ಕರೆದಿದ್ದೀರಾ? ಇದು ಕಾನೂನಿನ ಪ್ರಕಾರ ಅತಿಕ್ರಮಣ ಪ್ರವೇಶವಾಗಿದೆ. ಮರಗಳನ್ನು ಉಳಿಸಬೇಕು ಎಂದು‌ ಪತ್ರದ ಮೂಲಕ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಮರ ಕಡಿದು ಹೆಲಿಟೂರಿಸಂ ಮಾಡಲು ನಾವು ಬಿಡುವುದಿಲ್ಲ: ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಖಡಕ್ ವಾರ್ನಿಂಗ್

For All Latest Updates

TAGGED:

ABOUT THE AUTHOR

...view details