ಮೈಸೂರು: ರಾಜ್ಯದಲ್ಲಿ ಗುಪ್ತಚರ ಇಲಾಖೆ ನಿರ್ಲಕ್ಷ್ಯ ಮಾಡಿದ್ದು , ಕ್ರಿಮಿನಲ್ ಗಳ ಮೇಲೆ ಕಣ್ಣಿಟ್ಟಿಲ್ಲ. ಹರ್ಷನ ಮೇಲೆ ನಾಲ್ಕು ವರ್ಷದಿಂದ ಕಣ್ಣಿಟ್ಟಿದ್ದರೂ, ಘಟನೆಯನ್ನ ತಡೆಯುವಲ್ಲಿ ವಿಫಲವಾಗಿದೆ ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಈ ಘಟನೆಯ ನಂತರ ಇಸ್ಲಾಮಿಕ್ ಶಕ್ತಿಗಳು ಬಾಲ ಬಿಚ್ಚಿದರೆ ಸುಮ್ಮನೀರಲು ಸಾಧ್ಯವಿಲ್ಲ. ಘಟನೆಯನ್ನ ನೋಡಿದರೆ ಒಂದು ತರಬೇತಿ ಹೊಂದಿರುವ ಗುಂಪಿನ ಷ್ಯಡ್ಯಂತ್ರ ಇದೆ ಎನಿಸುತ್ತಿದೆ. ಇದರ ಹಿಂದೆ ಸಂಘಗಳು ಇವೆ. ಎಸ್.ಡಿ.ಪಿ.ಐ ಹಾಗೂ ಪಿ.ಎಫ್. ಐ ಸಂಘಟನೆಗಳನ್ನ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಮಚ್ಚು ಹಿಡಿದುಕೊಂಡು ಹೊಡೆದಾಡುತ್ತೇವೆ ಎನ್ನುವುದಕ್ಕೆ ಇದು ಅಫ್ಘಾನಿಸ್ತಾನವಲ್ಲ. ಈ ದೇಶದ ಅನ್ನ ತಿನ್ನುವ ನೀವು ಸಂವಿಧಾನಕ್ಕೆ ಬದ್ದರಾಗಿರಬೇಕು. ದೇಶದಲ್ಲಿ ಸಂವಿಧಾನವಿದೆ, ನ್ಯಾಯಾಲಯವಿದೆ ನಿಮಗೆ ತೊಂದರೆಯಾದರೆ ನ್ಯಾಯಾಲಯಕ್ಕೆ ಹೋಗಿ, ಅದನ್ನ ಬಿಟ್ಟು ಲಾಂಗ್ ಮಚ್ಚು ಹಿಡಿದುಕೊಂಡು ಬಂದರೆ ಸರಿಯಲ್ಲ ಎಂದು ಎಚ್ಚರಿಕೆ ಮಾತುಗಳನ್ನು ಆಡಿದ್ದಾರೆ.
ಎನ್ಕೌಂಟರ್ ಮಾಡಿಯೇ ಉತ್ತರ ಕೊಡಬೇಕು ಎಂದ ಪ್ರಮೋದ್ ಮುತಾಲಿಕ್ ಇದನ್ನೂ ಓದಿ: ಅಭಿಮತ: ರಷ್ಯಾದ ಸೈನ್ಯ ಶಕ್ತಿಯೆದುರು ನಿಲ್ಲುವುದೇ ಉಕ್ರೇನ್?
ಹರ್ಷ ಕೊಲೆ ಕೇಸ್ನಲ್ಲಿ ಬಂಧಿತರಾಗಿರುವವರು ಕ್ರಿಮಿನಲ್ಗಳು. ಅವರನ್ನ ಎನ್ಕೌಂಟರ್ ಮಾಡಿಯೇ ಉತ್ತರ ಕೊಡಬೇಕು. ಇಲ್ಲದಿದ್ದರೇ, ವಿಶೇಷ ನ್ಯಾಯಾಲಯ ರಚನೆ ಮಾಡಿ ತುರ್ತಾಗಿ ಈ ಪ್ರಕರಣವನ್ನ ಮುಗಿಸಿ ಆರೋಪಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.