ಮೈಸೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷ(ಆಪ್)ಕ್ಕೆ ಕೆಲ ಬಿಜೆಪಿಯೇತರ ರಾಜಕೀಯ ಮುಖಂಡರು ಶುಭಕೋರಿ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಗೋಲಿಬಾರ್ ಮಾಡೋರಿಗೆ ಜನ ಪೊರಕೇಲಿ ಹೊಡೆದ್ರು: ಬಿಜೆಪಿ ವಿರುದ್ಧ ರೈ ಪರೋಕ್ಷ ಟ್ವೀಟ್ ದಾಳಿ - ಬಹುಭಾಷಾ ನಟ ಪ್ರಕಾಶ್ ರೈ
ದೆಹಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗುದ್ದುಗೆ ಏರಿರುವ ಆಮ್ ಆದ್ಮಿ ಪಕ್ಷ(ಆಪ್)ಕ್ಕೆ ಶುಭಕೋರಿ, ಬಿಜೆಪಿ ಪಕ್ಷವನ್ನು ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮೂಲಕ ಜರೆದಿದ್ದಾರೆ.

ಪ್ರಕಾಶ್ ರೈ ಟ್ವೀಟ್
ಬಿಜೆಪಿ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಬಹುಭಾಷಾ ನಟ ಪ್ರಕಾಶ್ ರೈ(ಪ್ರಕಾಶ್‌ರಾಜ್) ವಾಗ್ದಾಳಿ, ಟೀಕೆ ಮಾಡುತ್ತಿದ್ದಾರೆ. ಇದೀಗ ದೆಹಲಿ ಚುನಾವಣೆ ಹಿನ್ನೆಲೆಯಲ್ಲೂ ಅವರು ಟ್ವೀಟ್ ಮೂಲಕ ಕಾಲೆಳೆದಿದ್ದಾರೆ. ಮಂಗಳೂರು ಗೋಲಿಬಾರ್ ಪ್ರಕರಣ ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ಗೋಲಿಬಾರ್ ಮಾಡೋರಿಗೆ ಜನ ಪೊರಕೇಲಿ ಹೊಡೆದ್ರು..SHOCK ಹೊಡೀತಾ?? ಎಂದು ಬರೆದುಕೊಂಡಿದ್ದಾರೆ.