ಮೈಸೂರು: ರಮಾಬಾಯಿ ನಗರದ ಮುಖ್ಯ ರಸ್ತೆಯಲ್ಲಿರುವ ಸೇತುವೆ ಬಳಿ ಬಳಸಿದ ಪಿಪಿಇ ಕಿಟ್ ಬಿಸಾಡಿರುವುದರಿಂದ, ಇಲ್ಲಿನ ನಿವಾಸಿಗಳು ಆತಂಕದಿಂದಲೇ ತಿರುಗಾಡುವಂತಾಗಿದೆ.
ಮುಖ್ಯರಸ್ತೆ ಬಳಿ ಕಂಡುಬಂದ ಪಿಪಿಇ ಕಿಟ್‌ಗಳು, ಜನರ ಆಕ್ರೋಶ - ರಮಾಬಾಯಿ ನಗರದ ಮುಖ್ಯರಸ್ತೆಯಲ್ಲಿ ಬಿದ್ದಿರುವ ಪಿಪಿಇ ಕಿಟ್‌ಗಳು
ಜನವಸತಿ ಪ್ರದೇಶವೆಂದು ಗುರುತಿಸಿಕೊಂಡಿರುವ ಮೈಸೂರಿನ ರಮಾಬಾಯಿ ನಗರದ ಮುಖ್ಯ ರಸ್ತೆಯಲ್ಲಿಯೇ ಪಿಪಿಇ ಕಿಟ್ಗಳನ್ನು ಬಿಸಾಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ವಹಿಸಿ ಎಂದು ಜಿಲ್ಲಾಧಿಕಾರಿಗಳು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಜನರು ಸಾಮಾಜಿಕ ಕಾಳಜಿ ಮೆರೆಯುವಲ್ಲಿ ವಿಫಲರಾಗುತ್ತಿದ್ದಾರೆ. ಮಾಸ್ಕ್, ಹ್ಯಾಂಡ್ ಗ್ಲೌಸ್‌ಗಳನ್ನು ಮನಸೋ ಇಚ್ಛೆ ಬಿಸಾಡುತ್ತಿದ್ದಾರೆ. ಇಂದು ಜನವಸತಿ ಪ್ರದೇಶವೆಂದು ಗುರುತಿಸಿಕೊಂಡಿರುವ ರಮಾಬಾಯಿ ನಗರದ ಮುಖ್ಯ ರಸ್ತೆಯಲ್ಲಿಯೇ ಪಿಪಿಇ ಕಿಟ್ಗಳನ್ನು ಬಿಸಾಡಿರುವ ಕಿಡಿಗೇಡಿಗಳು ಸಾಮಾಜಿಕ ಪ್ರಜ್ಞೆಯನ್ನು ಮರೆತಿದ್ದಾರೆ.
ಪಿಪಿಇ ಕಿಟ್ ತೆರೆವುಗೊಳಿಸುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.