ಮೈಸೂರು: ಸಂಪ್ರದಾಯದಂತೆ ದಸರಾ ಆನೆಗಳು ಅರಮನೆ ಪ್ರವೇಶಿಸುವಾಗ ಪೂಜೆ ಮಾಡುವುದು ವಾಡಿಕೆ, ಅದರಂತೆ ಈ ವರ್ಷ ಶುಭ ಮುಹೂರ್ತದಲ್ಲಿ ಪೂಜೆ ಮಾಡಿ ಗಜ ಪಡೆಯನ್ನು ಅರಮನೆಗೆ ಕರೆದುಕೊಂಡು ಬಂದಿದ್ದೇವೆ ಎಂದು ಅರಮನೆ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಹೇಳಿದರು.
ಅರಮನೆಗೆ ಆಗಮಿಸಿದ ದಸರಾ ಗಜಪಡೆಗೆ ಪೂಜೆ ಸಲ್ಲಿಸಿ ಸ್ವಾಗತ - Cahmundeshwari Hill
ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗಜಪಡೆಗೆ ಮೈಸೂರು ಅರಮನೆ ಮುಂಭಾಗದಲ್ಲಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.
ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗಜ ಪಡೆಗೆ ಅರಮನೆ ಮುಂಭಾಗದಲ್ಲಿ ಪೂಜೆ ಸಲ್ಲಿಸಿ, ಬಳಿಕ ಆನೆಗಳನ್ನು ಅರಮನೆಯ ಆವರಣದ ಒಳಗೆ ನಿರ್ಮಾಣ ಮಾಡಿರುವ ಶೆಡ್ಗೆ ಇಂದು ಬರಮಾಡಿಕೊಳ್ಳಲಾಯಿತು.
ಬಳಿಕ ಚಾಮುಂಡೇಶ್ವರಿ ಬೆಟ್ಟ ಹಾಗೂ ಮೈಸೂರು ಅರಮನೆಯ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮಾತನಾಡಿ, ಸಂಪ್ರದಾಯದಂತೆ ಆನೆಗಳಿಗೆ ಪೂಜೆ ಮಾಡುವುದನ್ನು ಪ್ರತೀ ವರ್ಷ ನಡೆಸಿಕೊಂಡು ಬರುತ್ತಿದ್ದೇವೆ, ಅದೇ ರೀತಿ ಇವತ್ತು ಕೂಡ ಪೂಜೆ ಮಾಡಿದ್ದೇವೆ. ಪ್ರತಿಯೊಂದು ಶುಭ ಕಾರ್ಯ ಮಾಡಬೇಕಾದಾಗ ಗಣಪತಿ ಪೂಜೆ ಮಾಡುವುದು ವಾಡಿಕೆ. ಇವತ್ತಿನಿಂದ ದಸರಾ ಅರಂಭವಾಗಿದ್ದು, ಸುಲಲಿತವಾಗಿ ದಸರಾ ನಡೆದು ರಾಜ್ಯ ಮತ್ತು ರಾಷ್ಟ್ರಕ್ಕೆ ಒಳ್ಳೆಯದಾಗುತ್ತದೆ. ಈ ವರ್ಷ ಶುಭಗಳಿಗೆಯಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಗಿದ್ದು, ನಾಡಿಗೆ ಒಳ್ಳೆಯದಾಗಲಿದೆ ಎಂದರು.