ಮೈಸೂರು :ನಂಜನಗೂಡು ಡಿವೈಎಸ್ಪಿ ನೇತೃತ್ವದಲ್ಲಿ ಪಟ್ಟಣದ ಸುತ್ತ ಪೊಲೀಸರು ಪಥಸಂಚಲನ ನಡೆಸಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ನಮಗೆ ಸಹಕಾರ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.
ನಿಮ್ಮ ರಕ್ಷಣೆ ನಮ್ಮ ಹೊಣೆ, ನೀವು ಮನೆಯಲ್ಲಿರಿ.. ನಂಜನಗೂಡಿಗೆ ಆತ್ಮಸ್ಥೈರ್ಯ ತುಂಬಿದ ಖಾಕಿ ಪಥಸಂಚಲನ! - Mysore Jubileeant Factory
ಸಾರ್ವಜನಿಕರು ಮನೆಯಲ್ಲಿಯೇ ಇರಿ. ನಿಮ್ಮನ್ನು ಸುರಕ್ಷಿತವಾಗಿ ಕಾಪಾಡಲು ನಮಗೆ ಅವಕಾಶ ನೀಡಿ ಎಂದು ಸಂದೇಶಗಳನ್ನು ಸಾರುತ್ತಾ ಪೊಲೀಸರು ಪಥಸಂಚಲನ ಮಾಡಿದರು.

ಜ್ಯುಬಿಲಿಯಂಟ್ ಕಾರ್ಖಾನೆಯ 26 ಮಂದಿ ನೌಕರರಿಗೆ ಕೊರೊನಾ ಸೋಂಕು ತಗಲಿರುವುದರಿಂದ ನಂಜನಗೂಡು ಪಟ್ಟಣದಲ್ಲಿ ಆತಂಕ ಆವರಿಸಿದೆ. ಎತ್ತ ನೋಡಿದ್ರೂ ಮೌನದ ಗಾಳಿ ಬೀಸುತ್ತದೆ. ಈ ಹಿನ್ನಲೆ ಸಾರ್ವಜನಿಕರು ಮನೆಯಲ್ಲಿಯೇ ಇರಿ. ನಿಮ್ಮನ್ನು ಸುರಕ್ಷಿತವಾಗಿ ಕಾಪಾಡಲು ನಮಗೆ ಅವಕಾಶ ನೀಡಿ ಎಂದು ಸಂದೇಶಗಳನ್ನು ಸಾರುತ್ತಾ ಪೊಲೀಸರು ಪಥಸಂಚಲನ ಮಾಡಿದರು.
ರಾಜ್ಯದ ರೆಡ್ ಜೋನ್ ವಲಯದಲ್ಲಿರುವ ಐದು ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಕೂಡ ಒಂದಾಗಿದೆ. ಅಲ್ಲದೇ ನಂಜನಗೂಡು ತಾಲೂಕು ಹಾಟ್‌ಸ್ಪಾಟ್ ಆಗಿರುವುದರಿಂದ ಸಾರ್ವಜನಿಕರು ಮನೆಯಿಂದ ಆಚೆ ಬರಲು ಕೂಡ ಭಯ ಪಡುವಂತಾಗಿದೆ. ಹೀಗಾಗಿ ಜನರಲ್ಲಿ ಆತಂಕ, ಭಯ ದೂರ ಮಾಡಿ ಜಾಗೃತಿ ಮೂಡಿಸಲು ಪೊಲೀಸರಿಂದ ಪಥ ಸಂಚಲನ ಕೈಗೊಳ್ಳಲಾಯಿತು.