ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕೋತಿಗಳಿಂದ ಜಾಗರೂಕರಾಗಿರಿ ಎಂದು ಪೋಲಿಸರು ಪ್ರಕಟಣೆ ಹೊರಡಿಸಿದ್ದು, ಎಚ್ಚರಿಕೆ ಫಲಕಗಳನ್ನು ಅಲ್ಲಲ್ಲಿ ಹಾಕಿದ್ದಾರೆ.
ಕೋತಿಗಳಿಂದ ಜಾಗರೂಕರಾಗಿರಿ: ಚಾಮುಂಡಿ ಬೆಟ್ಟದಲ್ಲಿ ಎಚ್ಚರಿಕೆಯ ಫಲಕಗಳು - undefined
ನಾಡ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಹಾವಳಿ ವಿಪರೀತವಾಗಿದ್ದು ದೇವಾಲಯಕ್ಕೆ ಬರುವ ಭಕ್ತರ ಬ್ಯಾಗ್ಗಳನ್ನು ಕಿತ್ತುಕೊಂಡು ದೇವಾಲಯದ ಗೋಪುರವನ್ನು ಏರುತ್ತವೆ. ಇದರಿಂದ ತುಂಬಾ ಜನ ತಮ್ಮ ಹಣ, ಮೊಬೈಲ್ ಎಲ್ಲವನ್ನು ಕಳೆದುಕೊಂಡಿದ್ದಾರೆ.
ಕೋತಿಗಳಿಂದ ಜಾಗರೂಕರಾಗಿರಿ: ಚಾಮುಂಡಿ ಬೆಟ್ಟದಲ್ಲಿ ಎಚ್ಚರಿಕೆಯ ಫಲಕಗಳು
ಸಾಮಾನ್ಯವಾಗಿ ದೇವಾಲಯದ ಬಳಿ ಸರಗಳ್ಳರಿದ್ದಾರೆ ಎಚ್ಚರ ಎಂಬ ಬೋರ್ಡ್ ಹಾಕುವುದು ಸರ್ವೇ ಸಾಮಾನ್ಯ. ಆದರೆ, ನಾಡ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಹಾವಳಿ ವಿಪರೀತವಾಗಿದ್ದು ದೇವಾಲಯಕ್ಕೆ ಬರುವ ಭಕ್ತರ ಬ್ಯಾಗ್ಗಳನ್ನು ಕಿತ್ತುಕೊಂಡು ದೇವಾಲಯದ ಗೋಪುರವನ್ನು ಏರುತ್ತವೆ. ಇದರಿಂದ ತುಂಬಾ ಜನ ತಮ್ಮ ಹಣ, ಮೊಬೈಲ್ ಎಲ್ಲವನ್ನು ಕಳೆದುಕೊಂಡಿದ್ದಾರೆ.
ಈ ಹಿನ್ನೆಲೆ ಕೆ.ಆರ್.ಪೊಲೀಸರು ದೇವಾಲಯದ ಸುತ್ತ ಫಲಕಗಳನ್ನು ಹಾಕಿದ್ದು, ನಿಮ್ಮ ವಸ್ತುಗಳ ಮೇಲೆ ಕೋತಿಗಳಿಂದ ಜಾಗೃತರಾಗಿರಿ ಎಂದು ಎಚ್ಚರಿಸಿದ್ದಾರೆ.
Last Updated : Jun 25, 2019, 5:42 PM IST