ಕರ್ನಾಟಕ

karnataka

ETV Bharat / state

ಮೈಸೂರಲ್ಲಿ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ: ಪೊಲೀಸರಿಗೆ ಸಿಕ್ಕಿತು ಸುಳಿವು

ಇತ್ತೀಚೆಗೆ ದೆಹಲಿಯ ಜೆಎನ್​ಯು ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿದ್ದ ಹಲ್ಲೆ ಖಂಡಿಸಿ ಮೈಸೂರು ವಿವಿಯಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಫ್ರೀ ಕಾಶ್ಮೀರ ಎಂಬ ಫಲಕ ಸದ್ದು ಮಾಡಿತ್ತು. ವಿವಿಯ ಹಳೆ ವಿದ್ಯಾರ್ಥಿನಿ ನಳಿನಿ ಬಾಲಕೃಷ್ಣ ಎಂಬುವರು ಈ ಫಲಕ ಹಿಡಿದುಕೊಂಡಿದ್ದು ಎಂಬುದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

By

Published : Jan 10, 2020, 12:51 PM IST

'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ ಯುವತಿ ,  Detected of accused who was holded the free kashmir poster
'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ ಯುವತಿ

ಮೈಸೂರು: ಮಾನಸಗಂಗೋತ್ರಿ ಕ್ಯಾಂಪಸ್​ನಲ್ಲಿ ಬುಧವಾರ ಸಂಜೆ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ ಕುರಿತ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದಾರೆ.

ಮೈಸೂರು ವಿವಿಯ ಹಳೆ ವಿದ್ಯಾರ್ಥಿನಿ ನಳಿನಿ ಬಾಲಕೃಷ್ಣ ಎಂಬುವರು ಈ ಫಲಕ ಹಿಡಿದುಕೊಂಡಿದ್ದು ಎಂಬುದು ತಿಳಿದುಬಂದಿದೆ. ಈಕೆ ಚೆನ್ನೈ ಮೂಲದವರಾಗಿದ್ದು, 2016ರ ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ವಿದ್ಯಾಬ್ಯಾಸ ಮಾಡಿದ್ದರು. ಪತ್ರಿಕೋದ್ಯಮ ವ್ಯಾಸಂಗದ ಬಳಿಕ ಗುಜರಾತ್​ನಲ್ಲಿ ಫೋಟೋ ಜರ್ನಲಿಸ್ಟ್ ಕೆಲಸ ಮಾಡುತ್ತಿದ್ದ ಈಕೆ, ಮೂರು ತಿಂಗಳ ಹಿಂದೆಯಷ್ಟೇ ಮೈಸೂರಿಗೆ ಬಂದಿದ್ದರು.

'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ ಯುವತಿ

ವರದಿ ಸಲ್ಲಿಸಿದ ಕುಲಸಚಿವ:
ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ ' ನಾಮಫಲಕ ಪ್ರದರ್ಶನಕ್ಕೆ ರಾಜ್ಯಪಾಲರು ವರದಿ ಕೇಳಿದ ಹಿನ್ನೆಲೆಯಲ್ಲಿ ಮೈಸೂರು ವಿವಿ ಕುಲಸಚಿವ ಶಿವಪ್ಪ ಅವರು ಇಂದು ವರದಿ ಕಳುಹಿಸಿದ್ದಾರೆ. ಇನ್ನು ಪ್ರತಿಭಟನೆ ಮಾಡಿದ ಎಲ್ಲರ ವಿರುದ್ಧ ಎಫ್ ಆರ್ ಐ ದಾಖಲು ಮಾಡುವಂತೆ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಒತ್ತಾಯಿಸಿದ್ದಾರೆ.

For All Latest Updates

ABOUT THE AUTHOR

...view details