ಮೈಸೂರು:ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ರೈತರ, ದಲಿತರ ಹಾಗೂ ಕಾರ್ಮಿಕ ಸಂಘಟನೆಯ ಐಕ್ಯ ಒಕ್ಕೂಟಗಳು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿವೆ.
ಐಕ್ಯ ಒಕ್ಕೂಟದಿಂದ ರಸ್ತೆತಡೆ: ರೈತರನ್ನು ವಶಕ್ಕೆ ಪಡೆದ ಪೊಲೀಸರು - police who took the farmers away
ಭೂಸುಧಾರಣಾ ಕಾಯ್ದೆ ಸೇರಿ ವಿವಿಧ ಕಾಯ್ದೆಗಳ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಎಲ್ಲಾ ತಿದ್ದುಪಡಿ ಕಾಯ್ದೆಗಳ ವಿರುದ್ಧ ರೈತ ಸಮುದಾಯ ಆಕ್ರೋಶ ಹೊರಹಾಕಿದ್ದು, ಮೈಸೂರಿನಲ್ಲಿ ಹೆದ್ದಾರಿ ತಡೆ ನಡೆಸಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈತರ ಪ್ರತಿಭಟನೆ
ವಾಹನ ಸಂಚಾರ ತಡೆದು ಪ್ರತಿಭಟಿಸಿದ ಹಿನ್ನೆಲೆ ಹಾಗೂ ನೀಡಿದ್ದ ಸಮಯ ಮೀರಿ ಪ್ರತಿಭಟಿಸಿದ್ದಕ್ಕೆ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಬಳಿ ರಸ್ತೆ ತಡೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆಗೆ ಕೇವಲ 10 ನಿಮಿಷಗಳು ಮಾತ್ರ ಕಾಲಾವಕಾಶ ನೀಡಿದ್ದು, ಹೆಚ್ಚು ಕಾಲ ಪ್ರತಿಭಟನೆ ನಡೆಸಿದಕ್ಕೆ ಪೋಲಿಸರು ರೈತರನ್ನು ವಶಕ್ಕೆಪಡೆದಿದ್ದಾರೆ.