ಮೈಸೂರು:ಇಲ್ಲಿಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಿನ ಜಾವ ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ 37 ಜನ ರೌಡಿ ಶೀಟರ್ಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ರೌಡಿಗಳನ್ನು ಹೆಬ್ಬಾಳ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ದಾಳಿ ವೇಳೆ ರೌಡಿ ಶೀಟರ್ ಸಲೀಂ ಎಂಬುವವರ ಮನೆಯಲ್ಲಿ ಮೂರು ಮಚ್ಚುಗಳು ಹಾಗೂ ಮತ್ತೊಬ್ಬನ ಮನೆಯಲ್ಲಿ ಒಂದು ಚಾಕು ದೊರೆತಿದೆ. ವಿಚಾರಣೆ ವೇಳೆ ಕೆಲವರು ರೌಡಿ ಶೀಟರ್ಗಳು ಗ್ಯಾಂಗ್ ಕಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ. ಕೆಲವು ರೌಡಿ ಶೀಟರ್ಗಳು ಮರ್ಡರ್ ಮತ್ತು ಕೊಲೆ ಪ್ರಯತ್ನ ಮಾಡಿದ ಕೇಸ್ಗಳಲ್ಲಿದ್ದಾರೆ ಎಂಬ ಮಾಹಿತಿ ಆಧರಿಸಿ ದಾಳಿ ಮಾಡಲಾಗಿದೆ.