ಕರ್ನಾಟಕ

karnataka

ETV Bharat / state

ಖಾಲಿ ಪತ್ರಕ್ಕೆ ಹೆಣದ ಹೆಬ್ಬೆಟ್ಟು ಪಡೆದ ಪ್ರಕರಣ.. ಈವರೆಗೆ ಯಾರನ್ನೂ ಬಂಧಿಸಿಲ್ಲ: ಡಾ. ಚಂದ್ರಗುಪ್ತ ಸ್ಪಷ್ಟನೆ - ನಗರ ಪೊಲೀಸ್ ಆಯುಕ್ತ ಡಾ‌. ಚಂದ್ರಗುಪ್ತ

ಒಟ್ಟು 7 ಕೋಟಿ ಮೌಲ್ಯದ ಸ್ವತ್ತುಗಳ ಕಳುವಾಗಿತ್ತು. ಈ ಪೈಕಿ 5.6 ಕೋಟಿ ಮೌಲ್ಯದ ಸ್ವತ್ತುಗಳು ವಶವಾಗಿದೆ. 6.5 ಕೆಜಿ ಚಿನ್ನ, 8.2 ಕೆಜಿ ಬೆಳ್ಳಿ, 196 ದ್ವಿಚಕ್ರ ವಾಹನ, 6 ಕಾರು, 10 ಇತರೆ ವಾಹನಗಳು, 49 ಮೊಬೈಲ್, 2 ಲ್ಯಾಪ್‌ಟಾಪ್, 309 ಕೆಜಿ ಗಂಧದ ತುಂಡು, 18.7 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ..

mysore Dead Body fingerprint case
ಅಮಾನತುಪಡಿಸಿಕೊಂಡ ಮಾಲುಗಳನ್ನ ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು

By

Published : Nov 29, 2021, 7:34 PM IST

ಮೈಸೂರು :ಖಾಲಿ ಬಾಂಡ್ ಪೇಪರ್ ಮೇಲೆ ಮೃತದೇಹದ ಹೆಬ್ಬೆಟ್ಟು ಒತ್ತಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಈವರೆಗೂ ಬಂಧಿಸಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಡಾ‌. ಚಂದ್ರಗುಪ್ತ ಅವರು ಸ್ಪಷ್ಟಪಡಿಸಿದ್ದಾರೆ.

ನಗರ ಪೊಲೀಸರು ಆಯುಕ್ತರ ಕಚೇರಿಯ ಆವರಣದಲ್ಲಿ ವಾರಸುದಾರರಿಗೆ ಸ್ವತ್ತು ವಾಪಸ್ ನೀಡಿದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಮೈಸೂರಿನ ಶ್ರೀರಾಂಪುರದಲ್ಲಿ ಮೃತಪಟ್ಟ ವೃದ್ದೆಯೋರ್ವರ ಹೆಬ್ಬೆಟ್ಟು ಒತ್ತಿಸಿಕೊಂಡಿರುವ ಪ್ರಕರಣದ ಘಟನೆ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಬ್ಬೆಟ್ಟು ಒತ್ತಿಸಿಕೊಂಡಿರುವ ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡ ಪ್ರಕರಣದ ಸಂಬಂಧ ನಗರ ಪೊಲೀಸ್ ಆಯುಕ್ತ ಡಾ‌. ಚಂದ್ರಗುಪ್ತ ಅವರು ಸ್ಪಷ್ಟನೆ ನೀಡುತ್ತಿರುವುದು..

ಪ್ರಾಪರ್ಟಿ ರಿಟರ್ನ್ ಪೆರೇಡ್ :ಸ್ವತ್ತು ಕಳವು ಪ್ರಕರಣಗಳಲ್ಲಿ ಅಮಾನತುಪಡಿಸಿಕೊಂಡ ಮಾಲುಗಳನ್ನ ವಾರಸುದಾರರಿಗೆ ನಗರ ಪೊಲೀಸ್ ಆಯುಕ್ತರು ವಾಪಸ್ ನೀಡಿದರು‌. ಕಳೆದೊಂದು ವರ್ಷದಲ್ಲಿ 676 ಸ್ವತ್ತು ಕಳವು ಪ್ರಕರಣ ದಾಖಲಾಗಿವೆ. ಈ ಪೈಕಿ 324 ಪ್ರಕರಣ ಪತ್ತೆಯಾಗಿವೆ. ವಿವಿಧ ಪ್ರಕರಣಗಳ ಸಂಬಂಧ 301 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಒಟ್ಟು 7 ಕೋಟಿ ಮೌಲ್ಯದ ಸ್ವತ್ತುಗಳ ಕಳುವಾಗಿತ್ತು. ಈ ಪೈಕಿ 5.6 ಕೋಟಿ ಮೌಲ್ಯದ ಸ್ವತ್ತುಗಳು ವಶವಾಗಿದೆ. 6.5 ಕೆಜಿ ಚಿನ್ನ, 8.2 ಕೆಜಿ ಬೆಳ್ಳಿ, 196 ದ್ವಿಚಕ್ರ ವಾಹನ, 6 ಕಾರು, 10 ಇತರೆ ವಾಹನಗಳು, 49 ಮೊಬೈಲ್, 2 ಲ್ಯಾಪ್‌ಟಾಪ್, 309 ಕೆಜಿ ಗಂಧದ ತುಂಡು, 18.7 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

4 ದರೋಡೆ, 7 ಸುಲಿಗೆ, 34 ಸರಗಳ್ಳತನ, 47 ಹಗಲು ರಾತ್ರಿ ಕನ್ನ-ಕಳವು, 9 ಮನೆಕಳ್ಳತ‌ನ, 5 ಮನೆಗೆಲಸದವರು ಮಾಡಿದ್ದ ಕಳ್ಳತನ, 212 ವಾಹನಗಳ ಕಳ್ಳತನ, 35 ಸಾಮಾನ್ಯ, 5 ಅರಣ್ಯ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ, ವಶಪಡಿಸಿಕೊಂಡ ಸ್ವತ್ತುಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ವಾಪಸ್ ನೀಡಲಾಗಿದೆ ಎಂದರು.

ಓದಿ:Viral Video: ಆಸ್ತಿ ಮೇಲಿನ ವ್ಯಾಮೋಹ.. ಮೈಸೂರಲ್ಲಿ ಖಾಲಿ ಪತ್ರಕ್ಕೆ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು!

ABOUT THE AUTHOR

...view details