ಕರ್ನಾಟಕ

karnataka

ETV Bharat / state

ಹೆಲ್ಮೆಟ್ ಎಲ್ಲಿ ಎಂದ ಎಸಿಪಿಗೆ ಬೈಕ್ ಸವಾರ ಕೊಟ್ಟ ಉತ್ತರವೇ ಡಿಫರೆಂಟ್.. ವಿಡಿಯೋ - police charged fine against bike rider

1 ಲಕ್ಷದ 20 ಸಾವಿರ ರೂ. ಕೊಟ್ಟು ಬೈಕ್ ತೆಗೆದುಕೊಂಡಿದ್ದೀಯ. ಹೆಲ್ಮೆಟ್ ಕೇಳಿದರೆ ಏನೇನೋ ಹೇಳುತ್ತಿಯಾ?..

police-charged-fine-against-bike-rider-in-mysore
ತಪಾಸಣೆ ವೇಳೆ ಪೊಲೀಸ್​ಗೆ ಸುಳ್ಳು ಉತ್ತರ ನೀಡಿದ ಬೈಕ್​ ಸವಾರ

By

Published : May 11, 2021, 7:37 PM IST

ಮೈಸೂರು : ಲಾಕ್‌ಡೌನ್ ಸಂದರ್ಭದಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸಿದ ಬೈಕ್ ಸವಾರನನ್ನು ತಡೆದ ಪೊಲೀಸರು ಪ್ರಶ್ನೆ ಮಾಡಿದ್ದು, ಇದಕ್ಕೆ ಬೈಕ್ ಸವಾರ ಭಿನ್ನವಾಗಿ ಉತ್ತರಿಸಿ ದಂಡ ಹಾಕಿಸಿಕೊಂಡಿರುವ ಘಟನೆ ನಗರದ ಆರ್ಗೇಟ್ ಬಳಿ ನಡೆದಿದೆ.

ನಗರದಲ್ಲಿ ಲಾಕ್​ಡೌನ್​ ಜಾರಿಯಾಗಿದ್ದರೂ ಅನವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಬೈಕ್ ಸವಾರರನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಇಲ್ಲದೆ ಬಂದ ಬೈಕ್ ಸವಾರನನ್ನು ಸಂಚಾರಿ ಎಸಿಪಿ ತಡೆದು, ಎಲ್ಲಿಗೆ ಹೋಗುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಪ್ರತಿಕ್ರಿಯಿಸಿರುವ ಬೈಕ್ ಸವಾರ, ನಾನು ಡಿಸಿ ಆಫೀಸ್​ನಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದೇನೆ ಎಂದು ಉತ್ತರ ಕೊಟ್ಟಿದ್ದಾನೆ.

ತಪಾಸಣೆ ವೇಳೆ ಪೊಲೀಸ್​ಗೆ ಸುಳ್ಳು ಉತ್ತರ ನೀಡಿದ ಬೈಕ್​ ಸವಾರ

ಇದರಿಂದ ಕೋಪಗೊಂಡ ಎಸಿಪಿ, ಹಾಗಾದ್ರೆ ಹೆಲ್ಮೆಟ್ ಎಲ್ಲಿ? ಎಂದು ಪುನಃ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಬೈಕ್ ಸವಾರ, 'ಗಾಡಿಯಲ್ಲಿ ಇಟ್ಟಿದ್ದೇ ಸಾರ್, ಯಾರೋ ಕದ್ದಿದ್ದಾರೆ' ಎಂದಿದ್ದಾನೆ.

ಹೀಗೆ ಉತ್ತರಿಸುತ್ತಿದ್ದಂತೆ ಕೋಪಗೊಂಡ ಸಂಚಾರಿ ಎಸಿಪಿ, 1 ಲಕ್ಷದ 20 ಸಾವಿರ ರೂ. ಕೊಟ್ಟು ಬೈಕ್ ತೆಗೆದುಕೊಂಡಿದ್ದೀಯ. ಹೆಲ್ಮೆಟ್ ಕೇಳಿದರೆ ಏನೇನೋ ಹೇಳುತ್ತಿಯಾ? ಎಂದು ಸ್ಥಳದಲ್ಲಿಯೇ ದಂಡ ವಿಧಿಸಿದ್ದಾರೆ.

ಓದಿ:ರಾಜ್ಯದೆಲ್ಲೆಡೆ ಪೊಲೀಸರಿಂದ ಲಾಠಿ ಏಟು : ಗಂಗಾವತಿಯಲ್ಲಿ ಮಾತ್ರ 'ಹೂವಿನ ಗಿಫ್ಟ್​'!!

ABOUT THE AUTHOR

...view details