ಕರ್ನಾಟಕ

karnataka

ETV Bharat / state

Mysuru Gangrape Case : ಆರೋಪಿಗಳನ್ನ ಕರೆತಂದು ಪೊಲೀಸರಿಂದ ಸ್ಥಳ ಮಹಜರು - mysore gangarape accused spot investigation

ಆ.24ರ ಸಂಜೆ ಯುವಕನ ಜೊತೆ ತೆರಳಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ..

police-brought-mysore-gangarape-accused-for-spot-investigation
Mysuru Gangrape Case: ಆರೋಪಿಗಳ ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು

By

Published : Aug 30, 2021, 6:19 PM IST

Updated : Aug 30, 2021, 9:22 PM IST

ಮೈಸೂರು:ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಪೊಲೀಸರು ನಗರದ ಹೊರವಲಯದ ಲಲಿತಾದ್ರಿಪುರ ನಿರ್ಜನ ಪ್ರದೇಶಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.

ಅತ್ಯಾಚಾರವೆಸಗಿದ ಸ್ಥಳಕ್ಕೆ ನಾಲ್ವರು ಆರೋಪಿಗಳನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಕರೆತರಲಾಗಿತ್ತು. ಆರೋಪಿಗಳು ಮದ್ಯಪಾನ ಮಾಡಿದ ಸ್ಥಳ ಹಾಗೂ ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ ಜಾಗ, ಎಲ್ಲೆಲ್ಲಿ ಸುತ್ತಾಡಿದ್ದು ಎಂಬುವುದರ ಬಗ್ಗೆ ಮಾಹಿತಿ ಪೊಲೀಸರು ಪಡೆದರು.

ಎಫ್​ಎಸ್​​ಎಲ್ ವರದಿ ಕೈ ಸೇರುತ್ತಿದ್ದಂತೆ ಓರ್ವ ಅಪ್ರಾಪ್ತನನ್ನು ಹೊರತುಪಡಿಸಿ, ಉಳಿದ ನಾಲ್ವರನ್ನು ಕೈಗೆ ಕೋಳ ತೊಡಿಸಿ, ಮುಖಕ್ಕೆ ಕಪ್ಪು ಬಟ್ಟೆ ಹಾಕಿಸಿಕೊಂಡು ಸ್ಥಳಕ್ಕೆ ಕರೆತರಲಾಗಿತ್ತು. ಅತ್ಯಾಚಾರವೆಸಗಿದ ಹಾಗೂ ಮದ್ಯಪಾನ ಮಾಡಿದ ಸ್ಥಳವನ್ನು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ ಪೊಲೀಸರು, ಪ್ರತಿಯೊಬ್ಬರೂ ನೀಡಿದ ಮಾಹಿತಿಯನ್ನು ವಿಡಿಯೋ ಮಾಡಿಕೊಂಡರು.

ಆರೋಪಿಗಳನ್ನ ಕರೆತಂದು ಪೊಲೀಸರಿಂದ ಸ್ಥಳ ಮಹಜರು

ಆರೋಪಿಗಳನ್ನು ಹೆಚ್ಚಿನ ಪೊಲೀಸ್ ಭದ್ರತೆಯಲ್ಲಿ ಟೆಂಪೋ ಟ್ರಾವೆಲರ್​​ ವಾಹನದಲ್ಲಿ ಸ್ಥಳಕ್ಕೆ ಕರೆತರಲಾಯಿತು. ಸ್ಥಳದ ಮಹಜರು ನಡೆಸಿದ ನಂತರ ಆರೋಪಿಗಳನ್ನು ಮತ್ತೆ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುಲಾಗಿದೆ.

ಆ.24ರ ಸಂಜೆ ಯುವಕನ ಜೊತೆ ತೆರಳಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Last Updated : Aug 30, 2021, 9:22 PM IST

ABOUT THE AUTHOR

...view details