ಮೈಸೂರು :ಮೊಬೈಲ್‍ಗಳನ್ನು ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯರಗನಹಳ್ಳಿಯ ವೆಂಕಟೇಶ್ (25), ಲಲಿತಾದ್ರಿಪುರ ಗ್ರಾಮದ ಸಂಜಯ್(21) ಬಂಧಿತ ಆರೋಪಿಗಳು.
ಮೈಸೂರು :ಮೊಬೈಲ್‍ಗಳನ್ನು ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯರಗನಹಳ್ಳಿಯ ವೆಂಕಟೇಶ್ (25), ಲಲಿತಾದ್ರಿಪುರ ಗ್ರಾಮದ ಸಂಜಯ್(21) ಬಂಧಿತ ಆರೋಪಿಗಳು.
ಆ.7ರಂದು ನಂಜುಂಡಸ್ವಾಮಿ ಎಂಬುವವರು ಟಿ.ಎನ್.ಪುರ ಮುಖ್ಯರಸ್ತೆಯ ವಜ್ರೇಗೌಡ ಪೆಟ್ರೋಲ್ ಬಂಕ್ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಆಟೋದಲ್ಲಿ ಬಂದ 4 ಜನ ಅಪರಿಚಿತರು ನಂಜುಂಡಸ್ವಾಮಿ ಅವರಿಂದ ಮೊಬೈಲ್
ಫೋನ್ ಕಿತ್ತು ಪರಾರಿಯಾಗಿದ್ದರು.
ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು, ಆ.10 ರಂದು ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡ ವೇಳೆ ಬಂಧಿತರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಕರಣ ಸಂಬಂಧ ತಮ್ಮ ಸಹಚರರ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಂಧಿತರಿಂದ ಸುಮಾರು 1.50ಲಕ್ಷ ರೂ. ಬೆಲೆಯ ಎರಡು ಮೊಬೈಲ್ ಫೋನ್‍ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಕ್ಕೆ ಪಡೆಯಲಾಗಿದ್ದು, ತಲೆ ಮರಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.