ಮೈಸೂರು : ಕೊಳೆತ ಟೊಮ್ಯಾಟೊ ಎಸೆದ ವಿಚಾರವಾಗಿ ಮಹಿಳೆಯನ್ನು ಕೊಲೆ ಮಾಡಿದ್ದ ತಂದೆ-ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಯಾತಮಾರನಹಳ್ಳಿ ನಿವಾಸಿಯಾದ ಶಿವರಾಜ್(57) ಹಾಗೂ ಗಿರೀಶ್(29) ಬಂಧಿತ ಆರೋಪಿಗಳು.
ಫೆಬ್ರವರಿ 2ರಂದು ಕೆಎನ್‌ಪುರದಲ್ಲಿ ಭಾರತಿ ಎಂಬುವರು ತಮ್ಮ ಮನೆ ಬಳಿ ನಡೆಸುತ್ತಿದ್ದ ಅಂಗಡಿಯಿಂದ ಕೊಳೆತ ಟೊಮ್ಯಾಟೊಗಳನ್ನು ಬೀದಿಗೆ ಬಿಸಾಡಿದ್ದರು.
ಇದೇ ವಿಚಾರವಾಗಿ ಎದುರು ಮನೆಯಲ್ಲಿದ್ದ ಶಿವರಾಜು ಮತ್ತು ಅವರ ಮಗ ಗಲಾಟೆ ಮಾಡಿದ್ದರು. ಇಬ್ಬರ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿ ಗಿರೀಶ್ ಮಚ್ಚಿನಿಂದ ಸುನೀತಾ ಹಾಗೂ ಆಕೆಯ ತಾಯಿ ಭಾರತಿ ಮೇಲೆ ಹಲ್ಲೆ ನಡೆಸಿದ್ದನು.