ಮೈಸೂರು:ನಿವೃತ್ತ ಶಿಕ್ಷಕಿಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ರಾಮಕೃಷ್ಣ ಬಡವಾಣೆಯ ನಿವೃತ್ತ ಶಿಕ್ಷಕಿ ಗೀತಾ ಶನಿವಾರ ಮಧ್ಯಾಹ್ನ ಬಡವಾಣೆಯ ಗಣಪತಿ ದೇವಸ್ಥಾನದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಆಕೆಯನ್ನು ಹಿಂಬಾಲಿಸಿದ ಖದೀಮ, ಅವರ ಕತ್ತಿನಿಂದ ಸರ ಕದ್ದು ಪರಾರಿಯಾಗಿದ್ದನು. ಈ ವೇಳೆ ಆತನ ಜೇಬಿನಿಂದ ಮೊಬೈಲ್ ಬಿದ್ದುಹೋಗಿತ್ತು.