ಕರ್ನಾಟಕ

karnataka

ETV Bharat / state

'ವಿಶ್ವ ಯೋಗ ದಿನ'ದಂದು ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಿರುವ ಪ್ರಧಾನಿ - yoga day in Mysore

ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

PM Narendra modi will visit to Chamundeshwari temple
ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ

By

Published : Jun 14, 2022, 3:10 PM IST

ಮೈಸೂರು: ಅಂತರರಾಷ್ಟ್ರೀಯ ಯೋಗ ದಿನದಂದು ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆಯ ದರ್ಶನ ಪಡೆಯಲಿದ್ದಾರೆ.

ಜೂನ್ 20 ಮತ್ತು 21ರಂದು ಕರ್ತವ್ಯ ನಿರ್ವಹಿಸುವ ದೇವಾಲಯದ ಸಿಬ್ಬಂದಿ, ನೌಕರರು, ಅರ್ಚಕರು, ಭದ್ರತಾ ಸಿಬ್ಬಂದಿ ಹಾಗೂ ಸ್ವಚ್ಛತಾ ಕೆಲಸ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಎರಡು ದಿನ ಸಮವಸ್ತ್ರ ಧರಿಸಿ ಬರಬೇಕು. ಜೂನ್ 11ರಿಂದ 25ರವರೆಗೆ ಯಾರೂ ಕೂಡ ಕರ್ತವ್ಯಕ್ಕೆ ಗೈರು ಹಾಜರಾಗದಂತೆ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕಾರ್ಯಕ್ರಮಗಳು:

1.ಅರಮನೆಯಲ್ಲಿ ರಾಜವಂಶಸ್ಥರನ್ನು ಪ್ರಧಾನಿ ಭೇಟಿಯಾಗಲಿದ್ದಾರೆ.

2.ಜೂನ್ 21ರ ಬೆಳಿಗ್ಗೆ 6:30 ರಿಂದ 7:45 ರವರೆಗೆ ಯೋಗ ದಿನ.

3.ಬಳಿಕ ವಸ್ತು ಪ್ರದರ್ಶನದ ಆವರಣದಲ್ಲಿ ನಡೆಯಲಿರುವ ಮತ್ತೊಂದು ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸುವರು.

ಇದನ್ನೂ ಓದಿ:ಜೆಡಿಎಸ್​​ಗೆ ಹೆಚ್.ಆರ್.ಶ್ರೀನಾಥ್ ರಾಜೀನಾಮೆ, ಕಾಂಗ್ರೆಸ್‌ ಸೇರಲು ಸಿದ್ಧತೆ

ABOUT THE AUTHOR

...view details