ಕರ್ನಾಟಕ

karnataka

ETV Bharat / state

ಮೈಸೂರು ಶಿಲ್ಪಿ ತಯಾರಿಸಿದ ಶಂಕರಾಚಾರ್ಯರ ಪ್ರತಿಮೆ: ಕೇದಾರನಾಥದಲ್ಲಿ ಅನಾವರಣಗೊಳಿಸಲಿರುವ ಪಿಎಂ - ಕೇದಾರನಾಥದಲ್ಲಿ ನಾಳೆ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸಲಿರುವ ಪಿಎಂ ಮೋದಿ

ಉತ್ತರಾಖಂಡ ರಾಜ್ಯದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 12 ಅಡಿ ಎತ್ತರದ ಶಂಕರಾಚಾರ್ಯರ ಪ್ರತಿಮೆಯನ್ನು ಶುಕ್ರವಾರ ಅನಾವರಣ ಮಾಡಲಿದ್ದಾರೆ. ಈ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ್ದಾರೆ.

shankaracharya idol
ಶಂಕರಾಚಾರ್ಯರ ಪ್ರತಿಮೆ

By

Published : Nov 4, 2021, 10:49 PM IST

Updated : Nov 5, 2021, 8:58 AM IST

ಮೈಸೂರು:ಇಲ್ಲಿನ ಶಿಲ್ಪಿ ತಯಾರಿಸಿದ ಶಂಕರಾಚಾರ್ಯರ ಪ್ರತಿಮೆಯನ್ನು ಉತ್ತರಾಖಂಡ ರಾಜ್ಯದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಅನಾವರಣಗೊಳಿಸಲಿದ್ದಾರೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಏಕಶಿಲೆಯಲ್ಲಿ ಸುಂದರವಾಗಿ ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಿಸಿ ಕೇದಾರನಾಥಕ್ಕೆ ಕಳುಹಿಸಿದ್ದಾರೆ. ಇದಕ್ಕೆ ಪ್ರಧಾನಿ ಕಾರ್ಯಾಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮೈಸೂರು ಶಿಲ್ಪಿ ತಯಾರಿಸಿದ ಶಂಕರಾಚಾರ್ಯರ ಪ್ರತಿಮೆ

ಕೇದಾರನಾಥ ಕ್ಷೇತ್ರದಲ್ಲಿ ಶ್ರೀಶಂಕರಾಚಾರ್ಯರ ಅಧ್ಯಯನ ಪೀಠ ಮತ್ತು ಮ್ಯೂಸಿಯಂ ಸ್ಥಾಪನೆಗೆ ಪ್ರಧಾನಿ ಮೋದಿಯವರು ತೀರ್ಮಾನಿಸಿದ್ದರು. ಅದರಂತೆ ಮೂರ್ತಿ ತಯಾರಿಕೆಗೆ ಕರ್ನಾಟಕದಲ್ಲಿ ನಾಲ್ಕು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ವೇಳೆ ಪ್ರಧಾನಿ ಕಾರ್ಯಾಲಯ ಪ್ರತಿಮೆಯನ್ನು ನಿರ್ಮಿಸಲು ಅರುಣ್ ಯೋಗಿರಾಜ್ ಅವರಿಗೂ ಅವಕಾಶ ನೀಡಿತ್ತು.

ಮೈಸೂರು ಶಿಲ್ಪಿ ತಯಾರಿಸಿದ ಶಂಕರಾಚಾರ್ಯರ ಪ್ರತಿಮೆ

ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅರುಣ್ ಯೋಗಿರಾಜ್, ತಮ್ಮ ಸಿಬ್ಬಂದಿ ಸಹಾಯದಿಂದ ಕೃಷ್ಣಶಿಲೆಯಲ್ಲಿ 12 ಅಡಿ ಎತ್ತರದ ಶಂಕರಾಚಾರ್ಯ ಪ್ರತಿಮೆಯನ್ನು ನಿರ್ಮಿಸಿದ್ದು, ಕೆಲ ದಿನಗಳ ಹಿಂದೆ ಕೇದಾರನಾಥಕ್ಕೆ ಕಳಿಸಿಕೊಟ್ಟಿದ್ದಾರೆ.

ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಮೆಯನ್ನು ಅನಾವರಣ ಮಾಡಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅರುಣ್ ಯೋಗಿರಾಜ ಅವರಿಗೆ ಅವಕಾಶ ಒದಗಿಬಂದಿತ್ತು. ಆದರೆ ಕೆಲಸದ ಒತ್ತಡ ಹಾಗೂ ಅನ್ಯ ಕಾರಣದಿಂದ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಮೈಸೂರಿನ ಶಿಲ್ಪಿ ನಿರ್ಮಿಸಿದ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ಜಿಲ್ಲೆಗೆ ಕೀರ್ತಿ ತಂದಿದೆ.

ಇದನ್ನೂ ಓದಿ: ದೀಪಾವಳಿಗೆ ಮನೆಗೆ ಹೋಗಬೇಕೆಂದು ಹಠ ಹಿಡಿದ ಪದ್ಮಶ್ರೀ ಸುಕ್ರಜ್ಜಿ: ಆಕ್ಸಿಜನ್​​​​ನೊಂದಿಗೆ ಕಳುಹಿಸಿಕೊಟ್ಟ ವೈದ್ಯರು

Last Updated : Nov 5, 2021, 8:58 AM IST

ABOUT THE AUTHOR

...view details