ಮೈಸೂರು: ಹುಲಿ ಯೋಜನೆಯ ಸುವರ್ಣ ಮಹೋತ್ಸವ ಹಿನ್ನೆಲೆ ಇಲ್ಲಿನ ಕರಾಮುವಿ ಘಟಿಕೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 2022ರ ಹುಲಿ ಗಣತಿ ವರದಿಯನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಈ ಗಣತಿ ಪ್ರಕಾರ ದೇಶದಲ್ಲಿ 2022ರಲ್ಲಿ 3167 ಹುಲಿಗಳಿರುವುದು ಗೊತ್ತಾಗಿದೆ.
ವರದಿಯಲ್ಲಿದೆ ದೇಶದ ಹುಲಿಗಳ ಸಂಖ್ಯೆ.. ಮೈಸೂರಿನ ಕರಾಮುವಿ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ 2022ರ ಹುಲಿ ಗಣತಿ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದರು. ಈ ವರದಿಯಂತೆ ದೇಶದಲ್ಲಿ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿರುವುದು ಕಂಡು ಬರುತ್ತದೆ. ವರದಿ ಪ್ರಕಾರ 2022ರಲ್ಲಿ ದೇಶದಲ್ಲಿ 3167 ಹುಲಿಗಳು ಇವೆ. ಇನ್ನು 2006ರಲ್ಲಿ 1411, 2010 ರಲ್ಲಿ 1706, 2014 ರಲ್ಲಿ 2226, 2018ರಲ್ಲಿ 2967 ಹುಲಿಗಳ ಇದ್ದವು. ಕಳೆದ 10 ವರ್ಷಗಳಲ್ಲಿ ಹುಲಿಗಳ ಸಂಖ್ಯೆಯಲ್ಲಿ ಶೇ.75 ರಷ್ಟು ಏರಿಕೆಯಾಗಿದೆ.
ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಕಳೆದ 10 ವರ್ಷದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಶೇ.75 ರಷ್ಟು ಏರಿಕೆಯಾಗಿದೆ. 2022ರಲ್ಲಿ ದೇಶದಲ್ಲಿರುವ ಹುಲಿಗಳ ಸಂಕ್ಯೆ 3167ಕ್ಕೆ ಏರಿಕೆ ಆಗಿದೆ. ಹುಲಿ ಸಂತತಿ ಹೆಚ್ಚುತ್ತಿರುವುದು ಗೌರವದ ಕ್ಷಣ ಎಂದು ಮೋದಿ ತಿಳಿಸಿದರರು.
ಪುರಾತನ ಕಾಲದಿಂದ ಹುಲಿಗೆ ಭಾರತದಲ್ಲಿ ವಿಶೇಷ ಸ್ಥಾನವಿದೆ. ಹುಲಿಗಳು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಮಧ್ಯ ಭಾರತದ ಹಲವೆಡೆ ಪೂಜಿಸಲಾಗುತ್ತದೆ. ಭಾರತ ಜಗತ್ತಿನ ಅತಿ ದೊಡ್ಡ ಹುಲಿ ಮತ್ತು ಆನೆ ಸಂರಕ್ಷಣಾ ದೇಶವಾವಾಗಿದೆ. ಜೊತೆ 4 ವರ್ಷಗಳಲ್ಲಿ ಭಾರತದಲ್ಲಿ ಚಿರತೆಗಳ ಸಂತತಿ ಹೆಚ್ಚಿದೆ ಎಂದರು.