ಕರ್ನಾಟಕ

karnataka

ETV Bharat / state

ಸಾಂಸ್ಕೃತಿಕ ನಗರಿಯಲ್ಲಿ ಊಟಿ ಮಾದರಿಯ ಗಾಜಿನ ಬಾಟಲ್ ಬಳಕೆಗೆ ಚಿಂತನೆ‌

ಮೈಸೂರಿನಲ್ಲಿ ಊಟಿ ಮಾದರಿಯಲ್ಲಿ ಗಾಜಿನ ಬಾಟಲ್ ಬಳಕೆಗೆ ಚಿಂತನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು. ಈ ಕುರಿತು ತಿಳಿಯಲು ಮೈಸೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳ ತಂಡವನ್ನು ಊಟಿಗೆ ಕಳುಹಿಸಿ ಅಲ್ಲಿ ಅಧ್ಯಯನ ನಡೆಸಲಾಗುವುದು ಎಂದರು.

plans-to-use-glass-bottles-in-mysore
plans-to-use-glass-bottles-in-mysore

By

Published : Apr 6, 2021, 5:39 PM IST

ಮೈಸೂರು:ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ ಮಾಡಿರುವ ಸಾಂಸ್ಕೃತಿಕ ನಗರಿಯಲ್ಲಿ ಈಗ ಊಟಿ ಮಾದರಿಯಲ್ಲಿ ಗಾಜಿನ ಬಾಟಲ್ ಬಳಕೆಗೆ ಚಿಂತನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು.

ಊಟಿಯ ಬಿಜೆಪಿ ಅಭ್ಯರ್ಥಿ ಬೋಜರಾಜ್ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಊಟಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಕನ್ನಡಿಗರು ಇದ್ದು, ಎಲ್ಲರೂ ಉತ್ತಮ ಪರಿಸ್ಥಿತಿಯಲ್ಲಿದ್ದಾರೆ. ಸಾಂಸ್ಕೃತಿಕ ನಗರಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದು, ಅದೇ ರೀತಿ ಗಾಜಿನ ಬಾಟಲ್ ಬಳಕೆಗೆ ಚಿಂತನೆ ನಡೆದಿದೆ ಎಂದರು.

ಮೈಸೂರಿನಲ್ಲಿ ಗಾಜಿನ ಬಾಟಲ್ ಬಳಕೆಗೆ ಚಿಂತನೆ

ಊಟಿ ಮಾದರಿಯ ಪ್ರಯೋಗವನ್ನು‌ ಮೈಸೂರಿನಲ್ಲೂ ಮಾಡಲು ಚಿಂತನೆ ಮಾಡಿರುವುದಾಗಿ ತಿಳಿಸಿದ ಸಚಿವರು, ಈ ಕುರಿತು ತಿಳಿಯಲು ಮೈಸೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳ ತಂಡವನ್ನು ಊಟಿಗೆ ಕಳುಹಿಸಿ ಅಲ್ಲಿ ಅಧ್ಯಯನ ನಡೆಸಲಾಗುವುದು. ಬಳಿಕ ಮೈಸೂರಿನ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಚಾಮುಂಡಿ ‌ಬೆಟ್ಟ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬದಲಿಗೆ ಗಾಜಿನ ಬಾಟಲ್ ಬಳಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಈ ಕ್ರಮದಲ್ಲಿ ಮೈಸೂರು ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಚಿಂತನೆ ನಡೆಸಿದ್ದಾರೆ.

ABOUT THE AUTHOR

...view details