ಮೈಸೂರು:ನನ್ನ ಜೀವನದ ಪಯಣದಲ್ಲಿ ನಾನು ಒಳ್ಳೆಯವನು ಆಗಬಹುದು. ಅಥವಾ ಕೆಟ್ಟವನೇ ಆಗಬಹುದು. ಆದ್ರೆ ತನ್ನ ತಾತ ಪಿಟೀಲು ಚೌಡಯ್ಯ ಅವರ ಹೆಸರು ಕೆಡದಂತೆ ಉಳಿಸುತ್ತೀನಿ ಎಂದು ಅಂಬರೀಶ್ ಹೇಳುತ್ತಿದ್ದರು. ಅದರಂತೆ ಅವರು ತಮ್ಮ ತಾತನ ಹೆಸರನ್ನು ಉಳಿಸಿಕೊಂಡರು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ನಾನೊಬ್ಬ ಸಂಸದೆ ಎನ್ನುವುದಕ್ಕಿಂತ ಚೌಡಯ್ಯನವರ ಕುಟುಂಬದ ಸದಸ್ಯೆ ಎಂಬುದೇ ಹೆಮ್ಮೆ : ಸುಮಲತಾ ಅಂಬರೀಶ್ - ಪಿಟೀಲು ಚೌಡಯ್ಯ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೆ.ಆರ್.ನಗರದ ಡಾ. ಕೆ.ಎಸ್.ಗೌಡಯ್ಯ ಪ್ರತಿಷ್ಠಾನ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ 'ಸಂಗೀತ ರತ್ನ ಪಿಟೀಲು ಚೌಡಯ್ಯ ಒಂದು ನೆನಪು' ಕಾರ್ಯಕ್ರಮವನ್ನು ಸುಮಲತಾ ಅಂಬರೀಶ್ ಉದ್ಘಾಟಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೆ.ಆರ್.ನಗರದ ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನ ಇವುಗಳ ಸಂಯುಕ್ತಾಶ್ರಯದಲ್ಲಿ ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 'ಸಂಗೀತ ರತ್ನ ಪಿಟೀಲು ಚೌಡಯ್ಯ ಒಂದು ನೆನಪು' ಕಾರ್ಯಕ್ರಮವನ್ನು ಪಿಟೀಲು ನುಡಿಸುವ ಮೂಲಕ ಉದ್ಘಾಟಿಸಿ ಸುಮಲತಾ ಮಾತನಾಡಿದರು.
ಅಂಬರೀಶ್ ನನಗೆ ಪರಿಚಯವಾದಾಗ ಪಿಟೀಲು ಚೌಡಯ್ಯನವರ ಸ್ಮಾರಕ ತೋರಿಸಿ ನಮ್ಮ ತಾತ ಎಂದು ಹೇಳುತ್ತಿದ್ದರು. ಎಲ್ಲೋ ತಮಾಷೆ ಮಾಡುತ್ತಿದ್ದಾರೆಂದು ಅಂದುಕೊಳ್ಳುತ್ತಿದ್ದೆ. ಆದರೆ, ನಂತರದ ದಿನಗಳಲ್ಲಿ ನನಗೆ ತಿಳಿಯಿತು. ನಾನೊಬ್ಬ ಸಂಸದೆ ಎನ್ನುವ ಮುಂಚಿತವಾಗಿ ಚೌಡಯ್ಯನವರ ಕುಟುಂಬದವರಲ್ಲಿ ಒಬ್ಬ ಸದಸ್ಯೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.