ಮೈಸೂರು: ಭಾನುವಾರ ನಗರದಲ್ಲಿ ಬಿಡುಗಡೆಯಾದ 'ಟಿಪ್ಪು ನಿಜ ಕನಸುಗಳು' ಪುಸ್ತಕ ನನ್ನ ಕೈ ಸೇರಿದೆ. ಇದೇ ನವೆಂಬರ್ 20 ರಿಂದ ಕೃತಿ ನಾಟಕ ಪ್ರದರ್ಶನವಾಗುವುದರ ವಿರುದ್ಧ ಪಿಐಎಲ್(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಹಾಕಲಾಗುವುದು ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಟಿಪ್ಪು ನಿಜ ಕನಸುಗಳು' ನಿನ್ನೆ ಬಿಡುಗಡೆಯಾಗಿದ್ದು, ಪುಸ್ತಕ ನನ್ನ ಕೈಸೇರಿದೆ. ಈ ಕೃತಿಯ ನಾಟಕ ರೂಪಾಂತರ ನವೆಂಬರ್ 20 ರಂದು ಪ್ರದರ್ಶನವಾಗಲಿದ್ದು, ನಾಟಕ ಪ್ರದರ್ಶನವಾಗದಂತೆ ಇಂದು ನಮ್ಮ ವಕೀಲರ ಮೂಲಕ ಪಿಐಎಲ್ ಸಲ್ಲಿಸುತ್ತೇನೆ. ಎಲ್ಲವನ್ನು ವಕೀಲರು ನೋಡಿಕೊಳ್ಳುತ್ತಾರೆ ಎಂದರು.
ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ಗುಂಬಜ್ ಮಾದರಿಯ ಬಸ್ ನಿಲ್ದಾಣಗಳನ್ನು ತೆರವು ಕುರಿತು ಸಂಸದ ಪ್ರತಾಪ್ ಸಿಂಹ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾರ ಯಾರ ದೃಷ್ಟಿಯಲ್ಲಿ ಏನೇನು ಕಾಣುತ್ತದೆಯೋ ಅದೇ ಕಾಣೋದು. ಬಸ್ ನಿಲ್ದಾಣ ಆಗಿರುವುದು ಸರ್ಕಾರದ ಹಣದಲ್ಲಿ. ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ಒಡೆದು ಹಾಕುವುದಾದರೆ ಅದೆಷ್ಟು ಹೊಡೆದು ಹಾಕುತ್ತಾರೋ, ಹಾಕಲಿ. ನಾವು ನೋಡಿಕೊಳ್ಳುತ್ತೇವೆ ಎಂದು ತನ್ವೀರ್ ಸೇಠ್ ಸಂಸದರಿಗೆ ಸವಾಲು ಹಾಕಿದರು.
ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರ ಸರಿಯಲ್ಲ. ಯಾರ ಮನಸ್ಸಿನಲ್ಲಿ ಏನೇನು ಇದೆಯೋ ಅದನ್ನೇ ಮಾಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇವೆಲ್ಲ ಸಾಮಾನ್ಯ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಇದನ್ನೂ ಓದಿ:'ಟಿಪ್ಪು ನಿಜ ಕನಸುಗಳು' ಕೃತಿ ತಡೆಗೆ ಕಾನೂನು ಹೋರಾಟ ಮಾಡುತ್ತೇವೆ: ಶಾಸಕ ತನ್ವಿರ್ ಸೇಠ್