ಮೈಸೂರು: ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲವಾದರೂ, ವ್ಯಾಕ್ಸಿನ್ ಪಡೆದುಕೊಂಡಿದ್ದೀರಿ ಎಂಬ ಮೆಸೇಜ್ ನೋಡಿ ವ್ಯಕ್ತಿ ಗೊಂದಲಕ್ಕೆ ಸಿಲುಕಿರುವ ಘಟನೆ ನಗರದಲ್ಲಿ ನಡೆದಿದೆ.
ಲಸಿಕೆ ಹಾಕಿಸಿಕೊಳ್ಳದಿದ್ದರೂ ವ್ಯಾಕ್ಸಿನೇಷನ್ ಸಕ್ಸಸ್ ಅಂತಾ ಮೆಸೇಜ್: ಮೈಸೂರಲ್ಲಿ ಮಹಾ ಯಡವಟ್ಟು - Message as Vaccination Success
ಕೊರೊನಾ ಲಸಿಕೆ ಪಡೆಯದ ವ್ಯಕ್ತಿಗೆ ಲಸಿಕೆ ಪಡೆದುಕೊಂಡಿದ್ದೀರಿ ಎಂದು ವ್ಯಕ್ತಿಯ ಮೊಬೈಲ್ಗೆ ಸಂದೇಶ ಬಂದಿರುವ ಪ್ರಸಂಗ ಮೈಸೂರಲ್ಲಿ ಬೆಳಕಿಗೆ ಬಂದಿದೆ.
ಮಧುಸೂದನ್ ಎಂಬುವವರು ಎಂಬ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಏ.28ರಂದು ಆನ್ಲೈನ್ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಗೆ ವ್ಯಾಕ್ಸಿನ್ ಪಡೆಯಲು ಹೋದಾಗ ವ್ಯಾಕ್ಸಿನ್ ಇಲ್ಲ, ಮಧ್ಯಾಹ್ನ ಬನ್ನಿ ಎಂದಿದ್ದಾರೆ. ಮಧುಸೂದನ್ ಆಸ್ಪತ್ರೆಗೆ ಮಧ್ಯಾಹ್ನ ಬಂದಾಗ ಜನರು ತುಂಬಿದ್ದರಿಂದ ನಾಳೆ ಹಾಕಿಸಿಕೊಂಡರಾಯಿತು ಎಂದು ವಾಪಸ್ ಮನೆಗೆ ಬಂದಿದ್ದಾರೆ. ಮನೆಗೆ ಬಂದಾಗ ಮಧುಸೂದನ್ ಮೊಬೈಲ್ಗೆ ವ್ಯಾಕ್ಸಿನೇಷನ್ ಸಕ್ಸಸ್ ಅಂತ ಮೆಸೇಜ್ ಬಂದಿದೆ.
ಇದರಿಂದ ಶಾಕ್ ಆದ ಮಧುಸೂದನ್ ಆಸ್ಪತ್ರೆಗೆ ತೆರಳಿ ವಿಚಾರಿದಾಗ ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ ಅದಕ್ಕೆ ಮೆಸೇಜ್ ಬಂದಿದೆ ಎಂದಿದ್ದಾರೆ. ಲಸಿಕೆ ನೀಡದೆಯೇ ಲಸಿಕೆ ಹಾಕಲಾಗಿದೆ ಎಂದು ವಂಚನೆ ಮಾಡುತ್ತಿದ್ದಾರೆ ಮಧುಸೂದನ್ ಆರೋಪಿಸಿದ್ದಾರೆ.