ಕರ್ನಾಟಕ

karnataka

ETV Bharat / state

ಮೈಸೂರು: ಸಿಎಂ ಖಾಸಗಿ ನಿವಾಸದ ಮೇಲೆ ಕಲ್ಲೆಸೆದ ವ್ಯಕ್ತಿ ಸೆರೆ - ಸಿಎಂ ಮನೆಯ ಕಿಟಕಿ ಗಾಜು

ಮೈಸೂರಿನಲ್ಲಿನ ಸಿಎಂ ಸಿದ್ದರಾಮಯ್ಯನವರ ಖಾಸಗಿ ನಿವಾಸದ ಮೇಲೆ ಕಲ್ಲೆಸೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಲ್ಲು ಎಸೆದ ವ್ಯಕ್ತಿ ಬಂಧನ
ಕಲ್ಲು ಎಸೆದ ವ್ಯಕ್ತಿ ಬಂಧನ

By ETV Bharat Karnataka Team

Published : Oct 10, 2023, 9:24 PM IST

ಮೈಸೂರು : ನಗರದ ಟಿ.ಕೆ.ಲೇಔಟ್​ನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಖಾಸಗಿ ನಿವಾಸದ ಮೇಲೆ ವ್ಯಕ್ತಿಯೊಬ್ಬ ಕಲ್ಲು ಎಸೆದಿದ್ದಾನೆ. ಆರೋಪಿಯನ್ನು ಸರಸ್ವತಿಪುರಂ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಮನೆಯ ಕಿಟಕಿ ಗಾಜುಗಳು ಹಾನಿಗೀಡಾಗಿವೆ. ನಿವಾಸದ ಭದ್ರತೆಗಿದ್ದ ಪೊಲೀಸರು ಆರೋಪಿ ಸತ್ಯಮೂರ್ತಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈತ ನಗರದ ಹೂಟಗಳ್ಳಿ ನಿವಾಸಿ ಎಂದು ಗುರುತಿಸಲಾಗಿದೆ.

ಇವಿಎಂ ಯಂತ್ರ ಒಡೆದು ಹಾಕಿದ್ದ:ಇದೇ ಆರೋಪಿಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೂಟಗಳ್ಳಿ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾನ ಮಾಡಲು ಆಗಮಿಸಿದ್ದಾಗ ಇವಿಎಂ ಯಂತ್ರ ಒಡೆದು ಹಾಕಿದ್ದ. ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ವಿರುದ್ಧ ಜಾಲತಾಣದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಸಿದ್ದರಾಮಯ್ಯ ಕಳೆದ ಭಾನುವಾರ ಮೈಸೂರಿನ ಮನೆಯಲ್ಲಿದ್ದಾಗ ಆರೋಪಿ ಸತ್ಯಮೂರ್ತಿ, ಟಿ.ಕೆ.ಲೇಔಟ್​ನ ಸಿಎಂ ಖಾಸಗಿ ಮನೆ ಬಳಿಗೆ ಬಂದು ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾನೆ.

ಇದೀಗ ಜಖಂಗೊಂಡ ಸಿಎಂ ಮನೆ ಕಿಟಕಿ ಗಾಜುಗಳನ್ನು ತಕ್ಷಣವೇ ದುರಸ್ತಿ ಮಾಡಲಾಗಿದೆ.

ಇದನ್ನೂ ಓದಿ:ಶಿವಮೊಗ್ಗ: ರಾಗಿಗುಡ್ಡಕ್ಕೆ ಭೇಟಿ ನೀಡಿದ ಕಟೀಲ್​ ನೇತೃತ್ವದ ಸತ್ಯ ಶೋಧನಾ ಸಮಿತಿ

ABOUT THE AUTHOR

...view details