ಕರ್ನಾಟಕ

karnataka

ETV Bharat / state

ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಅನುಮತಿ ಕೊಡಿ: ಸ್ಪೀಕರ್​ಗೆ ಸಾ.ರಾ.ಮಹೇಶ್ ಪತ್ರ - ಮೈಸೂರು ಲೇಟೆಸ್ಟ್ ನ್ಯೂಸ್

ಮೈಸೂರು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಿಧಾನ ಸಭೆಯಲ್ಲಿ ಹಕ್ಕುಚ್ಯುತಿ ಮಂಡಣೆಗೆ ಅನುಮತಿ ನೀಡುವಂತೆ ಕೇಳಿ‌ ಶಾಸಕ ಸಾ.ರಾ.ಮಹೇಶ್ ಸ್ಪೀಕರ್​​ಗೆ ಪತ್ರ ಬರೆದಿದ್ದಾರೆ.

ಸ್ಪೀಕರ್​ಗೆ ಸಾ.ರಾ.ಮಹೇಶ್ ಪತ್ರ
ಸ್ಪೀಕರ್​ಗೆ ಸಾ.ರಾ.ಮಹೇಶ್ ಪತ್ರ

By

Published : Jun 26, 2021, 4:03 PM IST

Updated : Jun 26, 2021, 4:18 PM IST

ಮೈಸೂರು:ತಮ್ಮ ವಿರುದ್ದ ಸುಳ್ಳು ಆರೋಪ ಮಾಡಿ ತೇಜೋವಧೆಗೆ ಯತ್ನಿಸಿರುವ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ವಿಧಾನ ಸಭೆಯಲ್ಲಿ ಹಕ್ಕುಚ್ಯುತಿ ಮಂಡಣೆಗೆ ಅನುಮತಿ ನೀಡುವಂತೆ ಕೇಳಿ‌ ಶಾಸಕ ಸಾ.ರಾ.ಮಹೇಶ್ ಸ್ಪೀಕರ್​​ಗೆ ಪತ್ರ ಬರೆದಿದ್ದಾರೆ.

ಮೈಸೂರು ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನನ್ನ ವಿರುದ್ಧ ಯಾವುದೇ ಆಧಾರವಿಲ್ಲದ ಆರೋಪ ಮಾಡಿದ್ದರು. ಸಾ.ರಾ.ಕಲ್ಯಾಣ ಮಂಟಪವನ್ನು ರಾಜ ಕಾಲುವೆ ಮೇಲೆ‌ ನಿರ್ಮಾಣ ಮಾಡಿದ್ದಾರೆ. ಗೋಮಾಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ಈ ಬಗ್ಗೆ ಪ್ರಾದೇಶಿಕ ಆಯುಕ್ತರ ತಂಡ ವರದಿ ನೀಡಿದ್ದು, ಸಾ.ರಾ.ಮಹೇಶ್​​ಗೆ ಕ್ಲೀನ್ ಚಿಟ್ ನೀಡಲಾಗಿತ್ತು.

ಆದರೂ ರೋಹಿಣಿ ಸಿಂಧೂರಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ನನ್ನ ತೇಜೊವಧೆಗೆ ಯತ್ನಿಸಿದ್ದಾರೆ. ಆದ್ದರಿಂದ ಮುಂದಿನ ಅಧಿವೇಶನದಲ್ಲಿ ಇವರ ವಿರುದ್ಧ ಹಕ್ಕುಚ್ಯುತಿ ಮಂಡಣೆಗೆ ಅನುಮತಿ ನೀಡಬೇಕೆಂದು ದಾಖಲೆ ಸಮೇತ ಶಾಸಕ ಸಾ.ರಾ.ಮಹೇಶ್ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ :ಪಾರಂಪರಿಕ ಕಟ್ಟಡ ನವೀಕರಣ ಆರೋಪ; ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ

Last Updated : Jun 26, 2021, 4:18 PM IST

ABOUT THE AUTHOR

...view details