ಕರ್ನಾಟಕ

karnataka

ETV Bharat / state

ರಕ್ಷಿಸಿದವರ ಮೇಲೆಯೇ ತಿರುಗಿಬಿದ್ದ ಆನೆ ಮರಿ! ಎದ್ದು-ಬಿದ್ದು ಓಡಿದ ಜನ-ವಿಡಿಯೋ - Latest Elephant Rescue news in mysore

ಸತ್ಯಮಂಗಲಂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಳವಾಡಿ ಗ್ರಾಮದ ಕಾಡಂಚಿನ ಪ್ರದೇಶದಿಂದ ಆಹಾರ ಅರಸಿ ಬಂದ ಆನೆಮರಿಯೊಂದು ಮೋರಿಗೆ ಬಿದ್ದಿತ್ತು. ಕಂದನ ರಕ್ಷಣೆಗೆ ಮುಂದಾದ ತಾಯಿ ಘೀಳುಡುತ್ತಿದ್ದ ಶಬ್ದ ಕೇಳಿದ ಸ್ಥಳೀಯರು ಸ್ಥಳಕ್ಕೆ ಹೋಗಿ ನೋಡಿದಾಗ ಮರಿಯಾನೆ ಮೋರಿಗೆ ಬಿದ್ದಿರುವುದನ್ನು ಕಂಡು ರಕ್ಷಿಸಿದರು. ಆದ್ರೆ ಅದು ರಕ್ಷಿಸದವರ ಮೇಲೆಯೇ ತಿರುಗಿಬಿದ್ದ ದೃಶ್ಯವೊಂದು ವೈರಲ್​ ಆಗಿದೆ.

peoples-save-elephant-in-mysore
ರಕ್ಷಣೆ ಮಾಡಿದವರ ಮೆಲೆ ತಿರುಗಿ ಬಿದ್ದ ಆನೆ ಮರಿ

By

Published : Feb 26, 2020, 7:24 PM IST

Updated : Feb 26, 2020, 9:28 PM IST

ಮೈಸೂರು: ಜಿಲ್ಲೆಯ ತಾಳವಾಡಿ ಗ್ರಾಮದಲ್ಲಿ ತಾಯಿ ಆನೆಯೊಂದಿಗೆ ಹೋಗುವಾಗ ಆಯತಪ್ಪಿ ಮೋರಿಗೆ ಬಿದ್ದಿದ್ದ ಮರಿ ಆನೆಯನ್ನು ಸ್ಥಳೀಯರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಆದ್ರೆ ತನ್ನನ್ನು ರಕ್ಷಿಸಿದವರನ್ನು ಮರಿ ಆನೆ ಅಟ್ಟಾಡಿಸಿಕೊಂಡು ಬಂದಿದೆ.

ಸತ್ಯಮಂಗಲಂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಳವಾಡಿ ಗ್ರಾಮದ ಕಾಡಂಚಿನ ಪ್ರದೇಶದಿಂದ ಆಹಾರ ಅರಸಿ ಬಂದ ಆನೆಮರಿಯೊಂದು ಮೋರಿಗೆ ಬಿದ್ದಿತ್ತು. ಕಂದನ ರಕ್ಷಣೆಗೆ ತಾಯಿ ಆನೆಯು ಘೀಳುಡುತ್ತಿದ್ದ ಶಬ್ದ ಕೇಳಿದ ಸ್ಥಳೀಯರು ಅಲ್ಲಿಗೆ ತೆರಳಿ ಮೋರಿಯಿಂದ ಆನೆಮರಿಯನ್ನು ಹರಸಾಹಸಪಟ್ಟು ರಕ್ಷಿಸಿದರು.

ರಕ್ಷಿಸಿದವರ ಮೇಲೆಯೇ ತಿರುಗಿಬಿದ್ದ ಆನೆ ಮರಿ!

ಅಪಾಯ ಎದುರಾಗಬಾರದು ಎಂದು ತಮಟೆ ಶಬ್ದ ಹಾಗೂ ಕೂಗಾಟದ ಮೂಲಕ ತಾಯಿ ಆನೆಯನ್ನು ದೂರ ಕಳುಹಿಸಿ ರಕ್ಷಣೆ ಮಾಡಲು ಮುಂದಾದಾಗ, ಮರಿಯಾನೆ ಮೊದಲು ಅತ್ತಿಂದಿತ್ತ ಓಡಾಡಿ ಸತಾಯಿಸಿತ್ತು. ಹೇಗೋ ಕಷ್ಟಪಟ್ಟು ಆನೆ ಮರಿಯನ್ನು ಮೋರಿಯಿಂದ ಜನರು ಮೇಲೆತ್ತಿದರು. ನಂತರ ತನ್ನನ್ನು ರಕ್ಷಣೆ ಮಾಡಿದರವ ಮೇಲೆ ಅದು ತಿರುಗಿಬಿದ್ದು ಅಟ್ಟಾಡಿಸಿಕೊಂದು ಬಂದಿದೆ.‌ ಈ ವಿಡಿಯೋ ವೈರಲ್​ ಆಗಿದೆ.

Last Updated : Feb 26, 2020, 9:28 PM IST

ABOUT THE AUTHOR

...view details