ಮೈಸೂರು :ಬಿಸಿಲಿನ ತಾಪ ತಾಳಲಾರದೆ ಕಿಟ್ ಪಡೆಯಲು ಬಂದಿದ್ದ ಜನ ಸಿಕ್ಕಸಿಕ್ಕ ಕಿಟ್ಗಳನ್ನ ಹೊತ್ತೊಯ್ದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.
ಬಿಸಿಲಿನ ಝಳ ತಾಳಲಾರದೇ ಸಿಕ್ಕ ಸಿಕ್ಕ ಕಿಟ್ಗಳನ್ನ ಹೊತ್ತೊಯ್ದ ಜನರು..
ಮಾಜಿ ಮಂತ್ರಿ ಹೆಚ್ ವಿಶ್ವನಾಥ್ ಹಾಗೂ ಸಿ ಹೆಚ್ ವಿಜಯಶಂಕರ್ ಅವರು ಸಾಂಕೇತಿಕವಾಗಿ ಕಿಟ್ ವಿತರಿಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬಿಸಿಲಿನಲ್ಲಿ ನಿಂತಿದ್ದ ಜನ, ವೇದಿಕೆಗೆ ನುಗ್ಗಿ ತಮಗೆ ಸಿಕ್ಕಸಿಕ್ಕ ಪಡಿತರ ಕಿಟ್ಗಳನ್ನ ತೆಗೆದುಕೊಂಡರು.
ಹುಣಸೂರು ಪಟ್ಟಣದ ಮುನೇಶ್ವರಕಾವಲ್ ಮೈದಾನದಲ್ಲಿ ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದವರಿಗೆ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಜಿ ಮಂತ್ರಿ ಹೆಚ್ ವಿಶ್ವನಾಥ್ ಹಾಗೂ ಸಿ ಹೆಚ್ ವಿಜಯಶಂಕರ್ ಅವರು ಸಾಂಕೇತಿಕವಾಗಿ ಕಿಟ್ ವಿತರಿಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬಿಸಿಲಿನಲ್ಲಿ ನಿಂತಿದ್ದ ಜನ, ವೇದಿಕೆಗೆ ನುಗ್ಗಿ ತಮಗೆ ಸಿಕ್ಕಸಿಕ್ಕ ಪಡಿತರ ಕಿಟ್ಗಳನ್ನ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಕಾರ್ಯಕ್ರಮದಲ್ಲಿ 200 ಮಂದಿಗೆ ಮಾತ್ರ ಪಡಿತರ ಕಿಟ್ ಹಾಗೂ ತರಕಾರಿ ವಿತರಿಸಲು ಆಯೋಜಿಸಲಾಗಿತ್ತು. ಆದರೆ, ಜನರು ಹೆಚ್ಚಾಗಿ ಬಂದ ಕಾರಣ ಈ ರೀತಿ ಗುಂಪು ಗುಂಪಾಗಿ ಮುಗಿಬಿದ್ದು ಸಿಕ್ಕ ಸಿಕ್ಕ ಕಿಟ್ಗಳನ್ನ ತೆಗೆದಕೊಂಡು ಹೋಗಿದ್ದಾರೆ.