ಮೈಸೂರು:ಸಾಂಸ್ಕೃತಿಕ ರಾಯಭಾರಿಗಳಾದ ಗಜಪಡೆ ತಾಲೀಮಿಗೆ ಅಗಮಿಸುವಾಗ, ದೇವರಾಜ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರಿಗಳು ಪ್ರತಿದಿನ ಉಚಿತವಾಗಿ ಹೂ ನೀಡಿ ನಮಸ್ಕರಿಸುತ್ತಾರೆ.
ತಾಲೀಮಿಗೆ ಬರುವ ಗಜಪಡೆಗೆ ಹೂ ಸಮರ್ಪಿಸಿ ಸ್ವಾಗತಿಸುವ ವ್ಯಾಪಾರಿಗಳು - latest news of mysur
ಸಾಂಸ್ಕೃತಿಕ ರಾಯಭಾರಿಗಳಾದ ಗಜಪಡೆ ತಾಲೀಮಿಗೆ ಅಗಮಿಸುವಾಗ, ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರಿಗಳು ಪ್ರತಿದಿನ ಉಚಿತವಾಗಿ ಹೂ ನೀಡಿ ವಿಶೇಷವಾಗಿ ಹೂವಿನ ಸ್ವಾಗತಿಸುತ್ತಾರೆ.
ತಾಲೀಮಿಗೆ ಬರುವ ಗಜಪಡೆಗೆ ಉಚಿತ ಹೂ ಸಮರ್ಪಿಸಿ ಸ್ವಾಗತ
ಜಂಬೂಸವಾರಿಗೆ ಕಾಡಿನಿಂದ ನಾಡಿಗೆ ಬರುವ ಗಜಪಡೆಗೆ ಪ್ರತಿದಿನ ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ತಾಲೀಮು ನಡೆಸುತ್ತಾರೆ. ಆದರೆ ಈ ಗಜ ಪಡೆ ಪ್ರತಿದಿನ ಕೆ.ಆರ್. ಸರ್ಕಲ್ ದಾಟಿ ದೇವರಾಜ ಮಾರುಕಟ್ಟೆಗೆ ಬರುತ್ತಿದ್ದಂತೆ ಎಲ್ಲಾ ವ್ಯಾಪಾರಿಗಳು ಒಂದೊಂದು ದಿನ ಎಲ್ಲಾ ಆನೆಗಳಿಗೂ ಉಚಿತವಾಗಿ ಹೂ ನೀಡಿ, ಆನೆಗೆ ನಮಸ್ಕರಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಿಗೆ ತಮ್ಮದೇ ರೀತಿಯಲ್ಲಿ ಸ್ವಾಗತ ಕೋರುತ್ತಾರೆ.