ಮೈಸೂರು: ನಂಜನಗೂಡಿನ ಹುಲ್ಲಹಳ್ಳಿಯಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ ಬ್ಯಾಂಕ್ ಮುಂದೆ ಜನ ಜಂಗುಳಿ ಸೇರಿರುವುದು ಕಂಡು ಬಂತು.
ಹುಲ್ಲಹಳ್ಳಿಯಲ್ಲಿ ಜನಸಾಮಾನ್ಯರಿಗೆ ಕೇವಲ ಒಂದು ಕಾರ್ಪೋರೇಶನ್ ಬ್ಯಾಂಕ್ ಮಾತ್ರ ಇದೆ. ಲಾಕ್‌ಡೌನ್ ಆಗಿದ್ದರಿಂದ ಹಣ ತೆಗೆಯಲು ಆಗುವುದಿಲ್ಲ ಎಂಬ ಆತಂಕದಿಂದ ಹಾಲು ಉತ್ಪಾದಕರ ಸಂಘ ಹಾಗೂ ವಿವಿಧ ಮಹಿಳಾ ಸಂಘಗಳ ಸದಸ್ಯರು ಬ್ಯಾಂಕ್ ಮುಂದೆ ಪ್ರತಿನಿತ್ಯ ಗುಂಪು ಸೇರುತ್ತಿದ್ದಾರೆ. ಇದರಿಂದ ಕೊರೊನಾ ಹರಡುವ ಆತಂಕ ಶುರುವಾಗಿದೆ.