ಕರ್ನಾಟಕ

karnataka

ETV Bharat / state

ಮೇಡಂ ನಿಲ್ಲಿ... ರೋಹಿಣಿ ಸಿಂಧೂರಿಯನ್ನ ತಡೆದು ಆಸ್ಪತ್ರೆ ಸಮಸ್ಯೆ ಬಿಚ್ಚಿಟ್ಟ ಮೈಸೂರು ಜನ - Mysore KR hospital problem

ಡಾಕ್ಟರ್​ಗಳು ಪ್ರತಿ ಔಷಧಿಗಳನ್ನು ತರಲು ಹೊರಗೆ ಚೀಟಿ ಬರೆದು ಕೊಡುತ್ತಾರೆ. ತಂದ ಔಷಧಿಗಳನ್ನು ಸರಿಯಾಗಿ ಹಾಕುವುದಿಲ್ಲ. ರೋಗಿಗಳನ್ನು‌ ನೋಡಲು ಲಂಚ ಕೊಡಬೇಕು ಎಂದು ತಮಗಾದ ನೋವನ್ನು ಜನರು ಜಿಲ್ಲಾಧಿಕಾರಿಗಳ ಮುಂದೆ ಹೇಳಿಕೊಂಡರು..

Mysore DC
Mysore DC

By

Published : May 24, 2021, 5:49 PM IST

Updated : May 24, 2021, 8:59 PM IST

ಮೈಸೂರು : ಕೆಆರ್ ಆಸ್ಪತ್ರೆಯ ವಾರ್ಡ್​ಗಳಲ್ಲಿ‌ ನೀರಿಲ್ಲ, ಸ್ವಚ್ಚತೆಯಿಲ್ಲ. ರೋಗಿಗಳಿಗೆ ಕಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳನ್ನು ತಡೆದು ಜನರು ಸಮಸ್ಯೆ ಹೇಳಿದ್ದು ಅವರ ಸಮಸ್ಯೆಗೆ ಜಿಲ್ಲಾಧಿಕಾರಿ ಸಮಾಧಾನದಿಂದ ಉತ್ತರ ನೀಡಿದರು.

ಬ್ಲ್ಯಾಕ್‌ ಫಂಗಸ್ ರೋಗಿಗಳ ವಾರ್ಡ್‌ನ ಪರಿಶೀಲನೆ ಮಾಡಿ ಕೆ.ಆರ್ ಆಸ್ಪತ್ರೆಯ ಕಚೇರಿಯಲ್ಲಿ ಅಧಿಕಾರಿಗಳ ಮತ್ತು ಡಾಕ್ಟರ್​ಗಳ ಸಭೆಯನ್ನು ನಡೆಸಲು ಹೋಗುವ ಸಂದರ್ಭದಲ್ಲಿ ವಾರ್ಡ್​ನ ಮುಂಭಾಗದಲ್ಲಿ ಇದ್ದ ರೋಗಿಗಳ ಸಂಬಂಧಿಕರು ಸಮಸ್ಯೆ ಹೇಳಿಕೊಂಡರು.

ಈ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್​ಗಳು ತುಂಬ ತೊಂದರೆ ಕೊಡುತ್ತಾರೆ. ದುಡ್ಡು ಕೊಟ್ಟರೆ ಮಾತ್ರ ರೋಗಿಗಳನ್ನು ನೋಡಲು ಬಿಡುತ್ತಾರೆ. ವಾರ್ಡ್​ನ ಒಳಗಡೆ ಶುಚಿತ್ವ ಇಲ್ಲ, ನೀರು ಸರಿಯಾಗಿ ಬರುವುದಿಲ್ಲ.

ಜಿಲ್ಲಾಧಿಕಾರಿಯನ್ನು ತಡೆದು ಕೆಆರ್​ ಆಸ್ಪತ್ರೆ ಸಮಸ್ಯೆ ಬಿಚ್ಚಿಟ್ಟ ಮೈಸೂರು ಜನರು

ಡಾಕ್ಟರ್​ಗಳು ಪ್ರತಿ ಔಷಧಿಗಳನ್ನು ತರಲು ಹೊರಗೆ ಚೀಟಿ ಬರೆದು ಕೊಡುತ್ತಾರೆ. ತಂದ ಔಷಧಿಗಳನ್ನು ಸರಿಯಾಗಿ ಹಾಕುವುದಿಲ್ಲ. ರೋಗಿಗಳನ್ನು‌ ನೋಡಲು ಲಂಚ ಕೊಡಬೇಕು ಎಂದು ತಮಗಾದ ನೋವನ್ನು ಜನರು ಜಿಲ್ಲಾಧಿಕಾರಿಗಳ ಮುಂದೆ ಹೇಳಿಕೊಂಡರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ಸಂಬಂಧ ದೂರು ( HELP DESK) ಪೆಟ್ಟಿಗೆಯನ್ನು ತೆರೆಯುವಂತೆ ಸೂಚಿಸಿದ್ದು, ಪ್ರತಿದಿನ ನಾನೇ ಖುದ್ದಾಗಿ ನೋಡುತ್ತೇನೆ ಎಂದು ಜನರನ್ನು ಸಮಾಧಾನ ಪಡಿಸಿದರು‌.

Last Updated : May 24, 2021, 8:59 PM IST

ABOUT THE AUTHOR

...view details